ಕೇಜ್ರಿ ಜೊತೆ ಕೈ ಜೋಡಿಸಿದ ಕಿಶೋರ್

ಕೇಜ್ರಿ ಜೊತೆ ಕೈ ಜೋಡಿಸಿದ ಕಿಶೋರ್

ನವದೆಹಲಿ, ಡಿ. 14 : ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯ ಚತುರ ಪ್ರಶಾಂತ ಕಿಶೋರ್ ಎಎಪಿ ಪಕ್ಷದ ಜೊತೆ ಕೈ ಜೋಡಿಸಿದ್ದಾರೆ. ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಹಿರಂಗ ಪಡಿಸಿದ್ದಾರೆ. ಪ್ರಶಾಂತ್ ಕಿಶೋರ್ ನೇತೃತ್ವದ ರಾಜಕೀಯ ಸಲಹಾ ಸಂಸ್ಥೆ ಐ ಪ್ಯಾಕ್ ಪಕ್ಷದ ಜೊತೆ ಕೈ ಜೋಡಿಸಿದೆ ಎಂದು ತಿಳಿಸಿದ್ದಾರೆ. “ಇಂಡಿಯನ್-ಪಿಎಸಿ ನಮ್ಮೊಂದಿಗೆ ಬರುತ್ತಿದೆ ಎಂದು ಹಂಚಿಕೊಳ್ಳಲು ಸಂತೋಷವಾಗಿದೆ. ನಿಮಗಿದೋ ಸ್ವಾಗತ!” ಎಂದು ಕೇಜ್ರಿವಾಲ್ ಟ್ಟೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಐ ಪ್ಯಾಕ್), “ಪಂಜಾಬ್ ಫಲಿತಾಂಶದ ನಂತರ ನಾವು ಎದುರಿಸಿದ ಅತ್ಯಂತ ಕಠಿಣ ಎದುರಾಳಿ ನೀವು ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ. ಕೇಜ್ರಿವಾಲ್ ಮತ್ತು ಎಎಪಿ ಜೊತೆ ಕೈ ಜೋಡಿಸಲು ಸಂತೋಷಪಡುತ್ತೇವೆ,” ಎಂದು ಟ್ಟೀಟ್ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos