ಕೈತಪ್ಪಿದ ವಿಶ್ವ ಸುಂದರಿ ಕಿರೀಟ

ಕೈತಪ್ಪಿದ ವಿಶ್ವ ಸುಂದರಿ ಕಿರೀಟ

ಲಂಡನ್ , ಡಿ. 15 : ಜಮೈಕಾ ಸುಂದರಿ ಟೋನಿ-ಆನ್ ಸಿಂಗ್ 2019ನೆ ಸಾಲಿನ ವಿಶ್ವ ಸುಂದರಿ ಕಿರೀಟ ಧರಿಸಿದ್ದಾರೆ. ಭಾರತದ ಚೆಲುವೆ ಸುಮನ್ ರಾವ್ 2ನೆ ರನ್ನರ್ ಅಫ್ ಪ್ರಶಸ್ತಿ ಗೆದ್ದು ಮುಗಳ್ನಗೆ ಬೀರಿದ್ದಾರೆ. ಇಂಗ್ಲೆಂಡ್ ರಾಜಧಾನಿ ಲಂಡನ್ನಲ್ಲಿ ನಿನ್ನೆ ರಾತ್ರಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕೆರಿಬಿಯನ್ ದ್ವೀಪರಾಷ್ಟ್ರದ 23ರ ಹರೆಯದ ಚೆಲುವೆ ಟೋನಿ ಆನ್ ಸಿಂಗ್ ವಿಶ್ವ ಸುಂದರಿ ಕಿರೀಟಧಾರಿಯಾದರು. ಅಮೆರಿಕದ ಫ್ಲಾರಿಡಾ ರಾಜ್ಯದಲ್ಲಿ ಮಹಿಳೆಯರ ಅಧ್ಯಯನ ಮತ್ತು ಮನಶಾಸ್ತ್ರ ವಿದ್ಯಾರ್ಥಿಯಾಗಿರುವ ಆನ್ ವೈದ್ಯೆಯಾಗುವ ಬಯಕೆ ಹೊಂದಿದ್ದಾರೆ. ಕೆರಿಬಿಯನ್ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಜಮೈಕಾದ ಈ ರೂಪಸಿ ಅನೇಕ ಸಾಮಾಜಿಕ ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದಾರೆ.

ತೀವ್ರ ಪೈಪೋಟಿ ಏರ್ಪಟ್ಟ ಫೈನಲ್ನಲ್ಲಿ ಟೋನ್-ಆನ್ ಸಿಂಗ್, ಫ್ರಾನ್ಸ್ ಮತ್ತು ಭಾರತದ ಸುಂದರಿಯರಿಗಿಂತ ಮೇಲುಗೈ ಸಾಧಿಸಿ ವಿಶ್ವ ಸುಂದರಿ ಕಿರೀಟ ಧರಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos