ಜ್ಯೂಸ್ ಕುಡಿತಿಯಾ ಆಯ್ತು‌ ಈಗ ನನ್ನ ಗೆಳತಿ ದರ್ಬಾರ್..!

ಜ್ಯೂಸ್ ಕುಡಿತಿಯಾ ಆಯ್ತು‌ ಈಗ ನನ್ನ ಗೆಳತಿ ದರ್ಬಾರ್..!

ಬೆಂಗಳೂರು, ಮೇ.8, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡದಲ್ಲಿ ಈಗೀಗ ರ್ಯಾಪ್ ಸಾಂಗ್ ಗಳ ಹಾವಳಿ ಹೆಚ್ಚಾಗ್ತಾ ಇದೆ, ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಮೂಲಕ ಹೆಚ್ಚು ಫೇಮಸ್ ಪಡೆದ ಈ ರ್ಯಾಪ್ ಸಾಂಗ್ ಗಳು ಸದ್ಯ ಸಿಕ್ಕಾಪಟ್ಟೆ ಹಿಟ್ ಆಗ್ತಾ ಇರೋದು ಇವುಗಳೆ. ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಸಖತ್ ಟ್ರೆಂಡ್ ಹುಟ್ಸಿದ್ದ ರ್ಯಾಪ್ ಸಾಂಗ್ ಅಂದ್ರೆ ಅದು ಜ್ಯೂಸ್ ಕುಡಿತಿಯಾ ಹಾಡು. ಎಲ್ಲಿ ನೋಡಿದ್ರೂ ಕೂಡ ಈ ಹಾಡು ಸಖತ್ ಹೆಸ್ರು ಮಾಡಿತ್ತು.

ಆದ್ರೆ ಇದೇ ಲಿಸ್ಟ್ ನಲ್ಲಿ ಮತ್ತೊಂದು ಹಾಡು ಸಖತ್ ಸೌಂಡ್ ಮಾಡ್ತಾ ಇದೆ. ಅದು ಮತ್ಯಾವ್ದೂ ಅಲ್ಲ.. ನನ್ನ ಗೆಳತಿ ನನ್ನ ಗೆಳತಿ‌ ಸಾಂಗ್..! ಹೌದು..ಉತ್ತರ ಕರ್ನಾಟಕದ ಒಂದು ಜಾನಪದ ಹಾಡು ಇದೀಗ ಎಲ್ಲರ ಬಾಯಲ್ಲೂ ಗುನುಗುವಂತೆ ಮಾಡಿದೆ. ಅಪ್ಪಟ ಜಾನಪದ ಶೈಲಿಯ ಹಾಡನ್ನು ವೆಸ್ಟರ್ನ್ ಗೆ ಬದಲಿಸಿ, ಜಾನಪದ ಹಾಡಿಗೆ ಹೊಸ ಟೆಚ್ ಕೊಟ್ಟು ಹಾಡಲಾಗಿದೆ. ಸದ್ಯ ನನ್ನ ಗೆಳತಿ ಈಗ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್ ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಂನಲ್ಲಿ‌ ಫುಲ್ ಫೇಮಸ್ ಆಗಿದೆ. ಇನ್ನು ಯೂಟ್ಯೂಬ್ ನಲ್ಲಿ ಲಕ್ಷಗಟ್ಲೇ ವೀವ್ ಕಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos