ಸದ್ಯದಲ್ಲೇ ಜಿಯೋ ಮಾರ್ಟ್ ಆರಂಭ!

 ಸದ್ಯದಲ್ಲೇ ಜಿಯೋ ಮಾರ್ಟ್ ಆರಂಭ!

ಮುಂಬೈ , ಡಿ. 31: ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದ ಜಿಯೋ ಶೀಘ್ರದಲ್ಲೇ ‘ಜಿಯೋ ಮಾರ್ಟ್’ ಆರಂಭಿಸುವ ಮೂಲಕ ಇ ಕಾಮರ್ಸ್ ಉದ್ಯಮಕ್ಕೆ ಕಾಲಿಡಲಿದೆ.

ದಿನ ಟೆಲಿಕಾಂ ವಲಯದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್  ಕಂಪನಿ ಈಗ ಇ ಕಾಮರ್ಸ್ ವಲಯದಲ್ಲೂ ಆಫರ್ ಗಳನ್ನು ಬಿಡುವ ಮೂಲಕ ಹೊಸ ಇತಿಹಾಸ ಬರೆಯಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

ರಿಲಯನ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಈ ವರ್ಷದ ಅಗಸ್ಟ್ ನಲ್ಲಿ ನಡೆದ 42ನೇ ವಾರ್ಷಿಕ ಸಭೆಯಲ್ಲಿ ಇ-ಕಾಮರ್ಸ್ ಉದ್ಯಮವನ್ನು ಹೊಸ ವಾಣಿಜ್ಯ ಉಪಕ್ರಮ ಎಂದು ಕರೆಯುವ ಮೂಲಕ ಜಿಯೋ ಮಾರ್ಟ್ ಆರಂಭಿಸುವ ಸುಳಿವು ನೀಡಿದ್ದರು. ಮೂರು ಕೋಟಿ ಆಫ್‍ಲೈನ್ ಚಿಲ್ಲರೆ ವ್ಯಾಪಾರಿಗಳನ್ನು ದೇಶದ 20 ಕೋಟಿ ಮನೆಗಳೊಂದಿಗೆ ಸಂಪರ್ಕಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದರು.

ವರದಿಗಳ ಪ್ರಕಾರ ರಿಲಯನ್ಸ್ ರಿಟೇಲ್, ತನ್ನ ಜಿಯೋ ಬಳಕೆದಾರರಿಗೆ ಜಿಯೋಮಾರ್ಟ್‍ಗೆ ನೋಂದಾಯಿಸಲು ಮತ್ತು ಪ್ರಾಥಮಿಕ ರಿಯಾಯಿತಿಗಳನ್ನು ಪಡೆದುಕೊಳ್ಳಲು ಆಹ್ವಾನವನ್ನು ಕಳುಹಿಸುತ್ತಿದೆ. 3 ಸಾವಿರ ರೂ. ನೀಡಿ ನೊಂದಾಯಿಸಿದ್ದಲ್ಲಿ ಜಿಯೋ ಮಾರ್ಟ್ ನಲ್ಲಿ ಹೆಚ್ಚಿನ ರಿಯಾಯಿತಿ ಪಡೆಯುವ ಅವಕಾಶ ನೀಡುವುದಾಗಿ ಹೇಳಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos