ಜೀಪ್ ಮೇಲೆ ಎರಗಿದ ಸಲಗ

ಜೀಪ್ ಮೇಲೆ ಎರಗಿದ ಸಲಗ

ಮೈಸೂರು, ಡಿ. 3 : ಆನೆಯೊಂದು ಜೀಪ್ನಲ್ಲಿ ಬರುತ್ತಿದ್ದ ಪ್ರವಾಸಿಗರ ಮೇಲೆ ಎರಗಲು ಮುಂದಾದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ನಾಗರಹೊಳೆ ಸಂರಕ್ಷಿತ ಅರಣ್ಯದ ಬಳಿ ನಡೆದಿದೆ.
ಪ್ರವಾಸಿಗರು ಜೀಪ್ನಲ್ಲಿ ಕಾಡಿನೊಳಗೆ ಹೋಗಿದ್ದರು. ಈ ವೇಳೆ ಕಾಡಾನೆ ಅವರನ್ನು ನೋಡಿ ಜೀಪ್ ಮೇಲೆ ಎರಗಲು ಮುಂದಾಗಿದೆ. ಆದರೆ ಅರಣ್ಯ ಪ್ರದೇಶದ ಟ್ರಂಚ್ ಪಕ್ಕ ಅಳವಡಿಸಿದ್ದ ಕಬ್ಬಿನದ ರಾಡ್ಗೆ ಒಂಟಿ ಸಲಗ ಡಿಕ್ಕಿ ಹೊಡೆದಿದೆ. ಕಬ್ಬಿಣದ ರಾಡ್ನಿಂದಾಗಿ ಜೀಪ್ ಸವಾರರು ಸೇಫ್ ಆಗಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸುಲ್ತಾನ ಎಂಬ ಹುಲಿ ಪ್ರವಾಸಿಗರ ವಾಹನವನ್ನು ಬೆನ್ನಟ್ಟಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು.

ಫ್ರೆಶ್ ನ್ಯೂಸ್

Latest Posts

Featured Videos