ಜ್ಯಾಕ್ವಸ್ ಸ್ಯಾವಿನ್ ನಿಂದ ಸತತ 100 ದಿನಗಳ ಸಮುದ್ರಪಯಣ!

ಜ್ಯಾಕ್ವಸ್ ಸ್ಯಾವಿನ್ ನಿಂದ ಸತತ 100 ದಿನಗಳ ಸಮುದ್ರಪಯಣ!

ಏ. 5, ನ್ಯೂಸ್ ಎಕ್ಸ್ ಪ್ರೆಸ್: ಜೀವನದಲ್ಲಿ ಒಬ್ಬೊಬ್ಬರಿಗೆ ಒಂದು ರೀತಿಯ ಹುಚ್ಚು ಸಾಹಸದ ಆಸೆಯಿರುತ್ತದೆ. ಇದೇ ರೀತಿ ಇಲ್ಲೊಬ್ಬ 72 ವರ್ಷದ ವೃದ್ಧನಿಗೆ ಸಮುದ್ರದಲ್ಲಿ ತೇಲುತ್ತಾ ಸಾಗಬೇಕು ಎನ್ನುವ ಆಸೆಯಿದ್ದು, ಇದನ್ನು ಕಳೆದ 100 ದಿನಗಳಿಂದ ಸಮುದ್ರದಲ್ಲಿ ತೇಲುತ್ತಾ ಈಡೇರಿಸಿಕೊಂಡಿದ್ದಾನೆ. ಹೌದು, ಜೀನ್‌ ಜ್ಯಾಕ್ವಸ್‌ ಸ್ಯಾವಿನ್‌ ಎನ್ನುವ ವ್ಯಕ್ತಿ ಅಟ್ಲಾಂಟಿಕ್‌ ಸಮುದ್ರದಲ್ಲಿ ಈ ರೀತಿ ಬ್ಯಾರೆಲ್‌ ಒಂದರ ಸಹಾಯದಿಂದ ತೇಲುತ್ತಾ ಹೋಗುತ್ತಿದ್ದು, ಹಲವು ಹಡಗುಗಳನ್ನು ನೋಡಿಕೊಂಡು ಹೋಗಿದ್ದಾರೆ. ಅಟ್ಲಾಂಟಿಕ್‌ ಸಮುದ್ರವನ್ನು ಸುತ್ತಬೇಕು ಎನ್ನುವ ಆಸೆಯೊಂದಿಗೆ ಈ ಪ್ರಯಣ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಡಿ.26ರಂದು ಕ್ಯಾನರಿ ದ್ವೀಪದಿಂದ ಬ್ಯಾರೆಲ್‌ನಲ್ಲಿ ತೇಲುವ ಪ್ರಯಾಣವನ್ನು ಆರಂಭಿಸಿದ್ದು, ಮೂರು ತಿಂಗಳ ಅವಧಿಯಲ್ಲಿ ಕ್ಯಾರೆಬಿಯನ್‌ ಸೇರಬೇಕು ಎನ್ನುವ ಗುರಿ ಹೊಂದಿದ್ದರಂತೆ. ಆದರೆ ಕ್ಯಾಪ್ರಿಯಸ್‌ ಅಲೆಗಳಿಂದ ತನ್ನ ಪ್ರಯಾಣ ತಡವಾಯಿತು ಎಂದು ಸುದ್ದಿ ಸಂಸ್ಥೆಗೆ ಸ್ಯಾಟಲೈಟ್‌ ಫೋನ್ ಮೂಲಕ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಈಗಾಗಲೇ ನಾಲ್ಕು ಸಾವಿರ ಕಿ.ಮೀ. ದೂರ ಸಾಗಿದ್ದು, ಇನ್ನೊಂದು ಸಾವಿರ ಕಿ.ಮೀ. ವ್ಯಾಪ್ತಿಯನ್ನು ಕ್ರಮಿಸಬೇಕಿದೆ. ಸ್ಯಾವಿನ್‌ ಪ್ರಕಾರ ಏ.20ರ ವೇಳೆಗೆ ಗುರಿ ತಲುಪುವ ವಿಶ್ವಾಸವಿದೆ. ಈ ಪ್ರಯಾಣದಲ್ಲಿ ತಾನು ಸ್ವಾತಂತ್ರ್ಯ ಎಂದರೇನು ಎನ್ನುವುದನ್ನು ತಿಳಿದೆ ಎಂದು ಹೇಳಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos