ಇದು ಶೋಕಿಗೋಸ್ಕರ ಅಲ್ಲ, ಸಮಾನತೆಗೆ!

ಇದು ಶೋಕಿಗೋಸ್ಕರ ಅಲ್ಲ, ಸಮಾನತೆಗೆ!

ಪುಣೆ, ಜ. 04: ಲಿಂಗ ಸಮಾನತೆ ಎಂದರೆ ಮಹಿಳೆಯರು, ಪುರುಷರು ಎನ್ನದೇ ನಾವೆಲ್ಲಾ ಸರಿ ಸಮಾನರು ಅಂತಾ ಬದುಕುವುದು. ಆದರೆ, ಅದನ್ನ ಬರಿ ಬಾಯ್ ಮಾತಲ್ಲೇ ಹೇಳಿದರೆ ಸಾಕಾ.? ರೂಢಿಯಲ್ಲೂ ತರಬೇಕು ಅಲ್ವಾ. ಹೀಗಾಗಿಯೇ ಪುಣೆಯ ಕಾಲೇಜೊಂದರ ಮೂವರು ವಿದ್ಯಾರ್ಥಿಗಳು ಸೀರೆ ಹಾಕಿಕೊಂಡು ಬಂದು ಎಲ್ಲರ ಗಮನ ಸೆಳೆದಿದ್ದಾರೆ. ಇದೆಲ್ಲಾ ಯಾವುದೇ ಶೋಕಿಗೋಸ್ಕರ ಅಲ್ಲ. ಬದಲಾಗಿ ಲಿಂಗ ಸಮಾನತೆ ದೃಷ್ಟಿಯಿಂದ. ಲಿಂಗ ಸಮಾನತೆಯನ್ನು ಸಾರುವ ದೃಷ್ಟಿಯಿಂದ ಪುಣೆಯ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೀರೆ ಧರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಆಕಾಶ್ ಪವಾರ್, ಸುಮಿತ್ ಹೊನ್ವಾಡ್ಜಕರ್, ಋಶಿಕೇಷ್ ಸನಪ್ ಎಂಬ ಮೂವರು ವಿದ್ಯಾರ್ಥಿಗಳು ಸೀರೆ ಧರಿಸಿ ಟ್ರೆಡಿಷನಲ್ ಡೇಗೆ ಬಂದದ್ದು ವಿಶೇಷವಾಗಿತ್ತು. ಅಲ್ಲದೇ ತಾವು ಸೀರೆ ಹಾಕಿಕೊಂಡು ಬಂದಿರುವುದರ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಆಕಾಶ್, ಪುರುಷರು ಇದೇ ತರ ಬಟ್ಟೆ ಹಾಕಿಕೊಳ್ಳಬೇಕು. ಮತ್ತು ಮಹಿಳೆಯರು ಇದೇ ಬಟ್ಟೆ ಧರಿಸಬೇಕು ಅಂತಾ ಎಲ್ಲೂ ಬರೆದಿಲ್ಲ. ಹೀಗಾಗಿ, ನಾವು ಸೀರೆ ಹಾಕಿಕೊಂಡು ಬಂದಿದ್ದೇವೆ ಅಂತಾ ಸಮರ್ಥಿಸಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos