ಬುಡಕಟ್ಟು ಸಂಸ್ಕೃತಿ ಉಳಿಸುವುದು ನಮ್ಮ ಹೊಣೆ

  • In State
  • August 10, 2020
  • 32 Views
ಬುಡಕಟ್ಟು ಸಂಸ್ಕೃತಿ ಉಳಿಸುವುದು ನಮ್ಮ ಹೊಣೆ

ಇಂಡಿ:ಭಾರತದ ಪ್ರತಿಯೊಂದು ಜನಾಂಗದ ಮೂಲ ಬುಡಕಟ್ಟು ಸಂಸ್ಕೃತಿಯಿAದಲೇ ಪ್ರಾರಂಭವಾಗುತ್ತದೆ. ಭಾರತದಲ್ಲಿ ೮೩೩ ಆದಿವಾಸಿ ಬುಡಕಟ್ಟು ಸಮುದಾಯಗಳಿವೆ ಎಂದು ಬುಡಕಟ್ಟು ಸಂಶೋಧಕ ಪ್ರೊ. ಎಸ್.ಬಿ.ಜಾಧವ ಹೇಳಿದರು.

ಅವರು ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ತಾಲ್ಲೂಕಾ ಘಟಕ ಇಂಡಿ ಸಹಯೋಗದಲ್ಲಿ ಪಟ್ಟಣದ ಹೊರವಲಯದಲ್ಲಿರುವ ಸಿದ್ಧಾರೂಢ ಮಠದಲ್ಲಿ ‘ವಿಶ್ವ ಬುಡಕಟ್ಟುಗಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ದೇಶದ ಎಲ್ಲಾ ಬುಡಕಟ್ಟುಗಳ ಜನಾಂಗ ಆಫ್ರಿಕಾದಿಂದ ಬಂದವರಾಗಿದ್ದಾರೆ. ಅವರ ಕಲೆ, ಸಾಹಿತ್ಯ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಬುಡಕಟ್ಟು ಜನರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರನ್ನು ಸರ್ಕಾರ ಸಶಕ್ತರನ್ನಾಗಿ ಮಾಡಬೇಕು ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಓಂಕಾರಾಶ್ರಮದ ಡಾ|| ಸ್ವರೂಪಾನಂದ ಸ್ವಾಮಿಗಳು, ಬುಡಕಟ್ಟು ಜನರು ಜಾನಪದ ಸಂಸ್ಕೃತಿ ಉಳಿಸುತ್ತಿದ್ದಾರೆ. ಗೋಂಧಳಿ, ಬುಡಬುಡಕಿ, ದಾಸರು, ಲಂಬಾಣಿ, ಜೋಗಿ, ಸುಡುಗಾಡ ಸಿದ್ಧರು, ಬಹುರೂಪಿಗಳು ಇಂದು ಕಲೆಯಲ್ಲಿ ಅಪರೂಪವಾಗುತ್ತಿದ್ದಾರೆ. ಅವರನ್ನು ಕಾಳಜಿ ಮಾಡಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಜಾಪ ಅಧ್ಯಕ್ಷ ಆರ್.ವ್ಹಿ.ಪಾಟೀಲ ಮಾತನಾಡಿ, ಕನ್ನಡ ಜಾನಪದ ಪರಿಷತ್ ನಡೆದುಬಂದ ದಾರಿ ಅದರ ಕಾರ್ಯಚಟುವಟಿಕೆಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ನಿವೃತ ಪ್ರಾಚಾರ್ಯ ಎ.ಎಸ್.ಗಾಣಿಗೇರ ಹಾಗೂ ವಿಶ್ರಾಂತ ಶಿಕ್ಷಕ ಎಸ್.ಎಲ್.ಕಡಕೋಳ ಅತಿಥಿಗಳಾಗಿ ಭಾಗವಹಿಸಿ ಬುಡಕಟ್ಟು ಜನಾಂಗದ ಕುರಿತು ಮಾತನಾಡಿ ಜಾನಪದ ಗೀತೆಗಳನ್ನು ಹಾಡಿದರು.

ಇಂಡಿ ಪಟ್ಟಣದ ಗೊಂಧಳಿ ಕಲಾವಿದರಾದ ಶ್ರೀಕೃಷ್ಣ ಮಾನೆ ಮತ್ತು ಬುಡಬುಡಕಿ ಕಲಾವಿದರಾದ ದೊಂಢಿಬಾ ಮಾನೆ ಇವರನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಾಗರ ಮಾನೆ ಹಾಗೂ ಭವಾನಿ ಶಂಕರ ಗೊಂಧಳಿ ತಂಡದವರಿAದ ಗೊಂಧಳಿಗರ ಹಾಡುಗಳ ಪ್ರದರ್ಶನ ನಡೆಯಿತು. ರಮೇಶ ಉಪ್ಪೀನ ಹಾಗೂ ವ್ಹಿ.ಎನ್.ದಸ್ತರೆಡ್ಡಿ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos