ವಾಣಿಜ್ಯ ನಗರಿಯಲ್ಲಿ ಐಟಿ ದಾಳಿ

ವಾಣಿಜ್ಯ ನಗರಿಯಲ್ಲಿ ಐಟಿ ದಾಳಿ

ಹುಬ್ಬಳ್ಳಿ, ಡಿ. 5: ನಗರಿಯಲ್ಲಿ ನಲವತ್ತಕ್ಕೂ ಹೆಚ್ಚು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು,

ವಿವಿಧ ಬಟ್ಟೆ ಅಂಗಡಿಗಳ‌ ಮೇಲೆ ದಾಳಿ ನಡೆಸಿ ಗಂಗಾವತಿ ಸಿಲ್ಕ್ ಪ್ಯಾಲೇಸ್ ಹಾಗೂ ಎಸ್.ಟಿ.ಭಂಡಾರಿ ಸೇರಿದಂತೆ ನಗರದ ನಲವತ್ತಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos