ಯಶ್​ ಆಡಿಟರ್ ಬಸವರಾಜ್​ ಕಚೇರಿ ಮೇಲೆ ಐಟಿ ದಾಳಿ

ಯಶ್​ ಆಡಿಟರ್ ಬಸವರಾಜ್​ ಕಚೇರಿ ಮೇಲೆ ಐಟಿ ದಾಳಿ

 ಬೆಂಗಳೂರು: ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ನಟ ಯಶ್​ ಆಡಿಟರ್ ಬಸವರಾಜ್​ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಯಶ್ ಮನೆ ಮೇಲೆ ಐಟಿ ದಾಳಿಯ ಬೆನ್ನಲ್ಲೇ ಇದೀಗ ಯಶ್ ಆಡಿಟರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಸವರಾಜ್​ ನಟ ಯಶ್ ಸೇರಿ ಸ್ಯಾಂಡಲ್​ವುಡ್ ಕೆಲ ನಿರ್ಮಾಪಕರ ಹಾಗೂ ನಟರ ಆಡಿಟರ್ ಕೂಡ ಆಗಿದ್ದಾರೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಖಾಸಗಿ ವಾಹನಗಳಲ್ಲಿ ಬಂದು, ಏಕಕಾಲದಲ್ಲಿ ದಾಳಿ ನಡೆಸಿದ 9 ಜನ ಐಟಿ ಅಧಿಕಾರಿಗಳು, ಸತತ 5 ಗಂಟೆಗಳ ಕಾಲ ತಪಾಸಣೆ ನಡೆಸಿದ್ದಾರೆ.

ಆಡಿಟರ್ ಬಸವರಾಜ್​ ಕಚೇರಿಯಲ್ಲಿನ ಕೆಲ ಮಹತ್ವದ ದಾಖಲಾತಿಗಳು ಹಾಗೂ ಕಡತಗಳನ್ನು ಪರಿಶೀಲಿಸಿ, 2 ಬ್ಯಾಗ್​ ಹಾಗೂ ಕೆಲ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸದ್ಯ ಐಟಿ ವಿಚಾರಣೆ ಎದುರಿಸುತ್ತಿರುವ ನಟ ಯಶ್​ ಗೆ ಈಗ ಮತ್ತೊಂದು ಸುತ್ತಿನ ಸಂಕಷ್ಟ ಎದುರಾಗಿದೆ ಅಂತ ಹೇಳಲಾಗ್ತಿದೆ. ದಾಖಲಾತಿಗಳನ್ನು ವಶಕ್ಕೆ ಪಡೆದ ಬೆನ್ನಲ್ಲೇ ನಟ ಯಶ್​ ಆಡಿಟರ್ ಬಸವರಾಜ್​ಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿ, ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ.

ಫ್ರೆಶ್ ನ್ಯೂಸ್

Latest Posts

Featured Videos