ಮತ್ತೆ ಈ ನಟಿ ಕನ್ನಡಕ್ಕೆ ರೀ ಎಂಟ್ರಿ?

ಮತ್ತೆ ಈ ನಟಿ ಕನ್ನಡಕ್ಕೆ ರೀ ಎಂಟ್ರಿ?

ಬೆಂಗಳೂರು, ಮಾ. 10: ಕನ್ನಡ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಒಂದಲ್ಲ ಒಂದು ಹೊಸ ಚಿತ್ರಗಳು ಮೂಡಿಬರುತ್ತಲ್ಲೇ ಇರುತ್ತದೆ. ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳಿಗೆ ದರ್ಶನ್ ಅಂದರೆ ಎಲ್ಲಿಲ್ಲದ ಹುಚ್ಚು ದರ್ಶನ್ ಅಭಿನಯದ ರಾಜವೀರ ಮದಕರಿ ಚಿತ್ರ ಚಿತ್ರಿಕರಣ ಭರದಿಂದ ನಡೆಯುತ್ತಿದೆ. ಆದರೆ ಈ ಚಿತ್ರಕ್ಕೆ ನಾಯಕಿ ಯಾರೆಂದು ಅಭಿಮಾನಿಗಳಲ್ಲಿ ಕುತೂಹಲ ಒಂದಿತ್ತು. ಅಭಿಮಾನಿಗಳ ಕುತೂಹಲಕ್ಕೆ ಇಂದು ಉತ್ತರ ಸಿಕ್ಕಿದೆ

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸ್ಯಾಂಡಲ್​​ವುಡ್​ನ ಬಹುನಿರೀಕ್ಷಿತ ರಾಜವೀರ ಮದಕರಿ ಚಿತ್ರದ ಶೂಟಿಂಗ್ ಒಂದು ಕಡೆ ಭರ್ಜರಿಯಾಗಿ ನಡೀತಿದ್ರೆ ಇನ್ನೊಂದು ಕಡೆ ಚಿತ್ರದ ಹೀರೋಯಿನ್ ಯಾರು ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಾನೆ ಇತ್ತು. ಇದೀಗ ಬ್ರೇಕಿಂಗ್ ನ್ಯೂಸ್ ಒಂದು ಸಿಕ್ಕಿದ್ದು ಫ್ಯಾನ್ಸ್ ಮುಖದಲ್ಲಿ ಸಂತಸ ಅರಳಿದೆ.

ರಾಜವೀರ ಮದಕರಿನಾಯಕ ಚಿತ್ರಕ್ಕೆ ಬಹುಭಾಷಾ ತಾರೆ ನಯನತಾರ, ನಾಯಕಿ ಆಗಿ ಬರ್ತಾರಂತೆ ಅನ್ನೋ ಸುದ್ದಿಯಿದೆ. ಇದು ಖಚಿತ ಎನ್ನುತ್ತಿವೆ ಮೂಲಗಳು. ಆದರೆ, ಈ ಕುರಿತು ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ. ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ನಾಯಕಿಯಾಗಿ ಸೂಪರ್ ಚಿತ್ರದಲ್ಲಿ ನಯನತಾರ ನಟಿಸಿದ್ರು. ಈಗ ಮತ್ತೆ ದರ್ಶನ್​ಗೆ ಜೋಡಿಯಾಗಿ ಕನ್ನಡಕ್ಕೆ ನಯನತಾರಾ ಕಮ್ ಬ್ಯಾಕ್ ಆಗಲಿದ್ಯಂತೆ.

ಸದ್ಯ, ಚಿತ್ರದ ಮೊದಲ ಹಂತದ ಚಿತ್ರೀಕರಣ ಹೈದರಾಬಾದ್​ನಲ್ಲಿ ಮುಕ್ತಾಯವಾಗಿದ್ದು, 2ನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಬಿ.ಎಲ್ ವೇಣು ಅವರ ಕಾದಂಬರಿ ಆಧಾರಿತ ಚಿತ್ರದ ಬಗ್ಗೆ ನಿರೀಕ್ಷೆಗಳು ಕೂಡ ಬೆಟ್ಟದಷ್ಟಿವೆ. ಚಿತ್ರದ ಪಾತ್ರಧಾರಿಗಳ ಕುರಿತು ಇರೋ ಕ್ಯೂರಿಯಾಸಿಟಿ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಈ ಮಧ್ಯೆ ನಯನತಾರಾ ದರ್ಶನ್​ಗೆ ಜೊತೆಯಾದ್ರೆ ಇಬ್ಬರ ಕಾಂಬಿನೇಶನ್ ತೆರೆಮೇಲೆ ಹೇಗಿರಬಹುದು ಅಂತಾ ಕಲ್ಪಿಸಿಕೊಳ್ಳೋಕೆ ಶುರು ಮಾಡಿದ್ದಾರೆ ದರ್ಶನ್ ಫ್ಯಾನ್ಸ್.

ಫ್ರೆಶ್ ನ್ಯೂಸ್

Latest Posts

Featured Videos