ಗ್ರಾಮ‌ ಪಂಚಾಯತಯಲ್ಲಿ ಅವ್ಯವಹಾರ

ಗ್ರಾಮ‌ ಪಂಚಾಯತಯಲ್ಲಿ ಅವ್ಯವಹಾರ

ಸಿರವಾರ, ಫೆ. 05: ತಾಲೂಕಿನ ಮಲ್ಲಟ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ಹೆಚ್ಚಾಗಿದ್ದು, ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಅದ್ಯಕ್ಷ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ರೂಪಿಸಬೇಕೆಂದು ಮಲ್ಲಟ ಗ್ರಾಮ ಪಂಚಾಯತಿಯ ನುಗಡೋಣಿ ಗ್ರಾಮದ ಸದಸ್ಯ ಶಿವಮ್ಮ ಬಸ್ಸಪ್ಪ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ನಾಲ್ಕುವರೆ ವರ್ಷದ ಅವಧಿಯಲ್ಲಿ ಗ್ರಾಮ ಪಂಚಾಯತಿಯಲ್ಲಿ ಜರುಗಿದ ಸಾಮಾನ್ಯ, ವಿಶೇಷ ಸಭೆಗೆ ದಲಿತ ಮಹಿಳೆ ಎಂದು ಅಹ್ವಾನ ನೀಡದೆ ನಮ್ಮ ವಾರ್ಡಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ನಿರ್ಲಕ್ಷ್ಯ ಮಾಡುತಿದ್ದಾರೆ.

ಸ್ವಾತಂತ್ರ್ಯ ಬಂದು 70 ವರ್ಷಗಳೂ ಕಳೆದರೂ ಮಲ್ಲಟ ಗ್ರಾಮ ಪಂಚಾಯತಿಯಲ್ಲಿ ಮಾತ್ರ ಜಾತಿ ನಿಂದನೆ ಮಾಡುತಿದ್ದು 2015-16 ರಿಂದ 2019 – 20 ನೇ ಸಾಲಿನಲ್ಲಿ ಪಂಚಾಯತಿ ಕಾರ್ಯಾಲಯದ ವತಿಯಿಂದ ಸುಮಾರು 4.5 ವರ್ಷಗಳ ಕಾಲ ಪಂಚಾಯತಿಯಲ್ಲಿ ನಡೆದ ಯಾವುದೇ ಸಭೆಗಳಿಗೆ ದಲಿತ ವರ್ಗಕ್ಕೆ ಸೇರಿದ ಮಹಿಳೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.

ಮಲ್ಲಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನುಗಡೋಣಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗೆ 1 ಲಕ್ಷ 90 ಸಾವಿರ ಹಾಗೂ ಮಲ್ಲಟ ಪಂಚಾಯತ ಕಟ್ಟಡ ರಿಪೇರಿಗೆ 14 ನೇ ಹಣಕಾಸು ಯೋಜನೆಯಲ್ಲಿ ಸುಮಾರು 3 ಲಕ್ಷ 60 ಸಾವಿರ ಸೇರಿದಂತೆ ಇತರೆ ಕಾಮಾಗಾರಿಗಳನ್ನು ಮಾಡದೆ ಬೋಗಸ್ ಬಿಲ್ ಮಾಡಲಾಗಿದೆ ಎಂದು ಆರೋಪಿಸದ‌ ಅವರು, ಇಲ್ಲಿಯವರೆಗೂ ನಮ್ಮ ಗ್ರಾಮಕ್ಕೆ ಶೌಚಾಲಯ, ಅಶ್ರಯ ಮನೆ, ಅನಿಲ ಭಾಗ್ಯ ಸೇರಿದಂತೆ ಸರಕಾರದ ಯಾವುದೇ ಸೌಲಭ್ಯಗಳು ನಮಗೆ ತಲುಪಿಲ್ಲ ಅದ್ದರಿಂದ ನಿರ್ಲಕ್ಷ್ಯಧೋರಣೆಯ ಮಾಡಿದ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ವಿರುದ್ಧ ತನಿಖೆ ರೂಪಿಸಿ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಪಂಚಾಯತಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ದಲಿತ ಸೇನೆಯ ಪ್ರಧಾನ ಕಾರ್ಯದರ್ಶಿ ಹೂಳೆಯಪ್ಪ, ಓಹಾನ್, ಬಸ್ಸಪ್ಪ, ದಲಿತ ಮುಖಂಡ ಅಮರೇಶ, ಸುರೇಶ ಮಾನ್ವಿ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos