ಐರಾಳ ಮೊದಲ ಹುಟ್ಟು ಹಬ್ಬ

ಐರಾಳ ಮೊದಲ ಹುಟ್ಟು ಹಬ್ಬ

ಬೆಂಗಳೂರು, ಡಿ. 2 : ನಟಿ ರಾಧಿಕಾ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಐರಾ, ಸಹೋದರನ ಜೊತೆ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ರಾಕಿಂಗ್ ದಂಪತಿ ಯ ಮಗಳು ಐರಾ ಇಂದು ತನ್ನ ಮೊದಲನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾಳೆ.
ರಾಧಿಕಾ ತಮ್ಮ ಇನ್ಸ್ಟಾದಲ್ಲಿ ಮಗಳ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ, “ನನ್ನ ಹೃದಯದ ಹಾಗೂ ಆತ್ಮದ ಒಂದು ಭಾಗ ನೀನು, ನನ್ನ ಏಂಜೆಲ್ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಐರಾಳ ಮೊದಲ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಕಿಂಗ್ ದಂಪತಿ ತಮ್ಮ ಮಗಳ ಫೋಟೋಶೂಟ್ ಮಾಡಿಸಿದ್ದರು. ಮನೆಯೊಳಗೆ ಮತ್ತು ಹೊರಗೆ ಐರಾಳನ್ನು ಕೂರಿಸಿ ಫೋಟೋ ಕ್ಲಿಕ್ಕಿಸಲಾಗಿತ್ತು. ಜೊತೆಗೆ ಐರಾ ಕೂಡ ಕ್ಯಾಮೆರಾಗೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಳು.

ಫ್ರೆಶ್ ನ್ಯೂಸ್

Latest Posts

Featured Videos