ಐಪಿಎಸ್ ಗಳ ಗುದ್ದಾಟ!

ಐಪಿಎಸ್ ಗಳ ಗುದ್ದಾಟ!

ಬೆಂಗಳೂರು : ನಿರ್ಭಯ ನಿಧಿ ಬಳಕೆ ಸಂಬಂಧ ಕರೆದಿರುವ ಟೆಂಡರ್ ಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರೂಪಾ ಆರೋಪಿದ್ದರು. ಡಿ. ರೂಪಾ ಅವರ ಹಕ್ಷಕ್ಷೇಫ ನಿಂಬಾಳ್ಕರ್ ಸರ್ಕಾರಕ್ಕೆ ಪತ್ರ ಬರೆದಿದ್ದರು.
ನಿರ್ಭಯ ನಿಧಿಯ ಸೇಫ್ ಯೋಜನೆ ಜಾರಿ ಸಂಬಂಧ ಕರೆದಿರುವ ಟೆಂಡರ್ ಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರಿಗೆ ಗೃಹ ಇಲಾಖೆ ಕಾರ್ಯರ್ದ ಡಿ. ರೂಪಾ ಮತ್ತೆ ಟಾಂಗ್ ಕೊಟ್ಟಿದ್ದಾರೆ.
ನಿರ್ಭಯ ಟೆಂಡರ್ ಆಹ್ವಾನ ಕಮಿಟಿ ಹಾಗೂ ಟೆಂಡರ್ ಭದ್ರತಾ ಕಮಿಟಿ ಅಧ್ಯಕ್ಷ ಹೇಮಂತ್ ನಿಂಬಾಳ್ಕರ್ ಸುಳ್ಳು ಮಾಹಿತಿ ನೀಡಿ ಸರ್ಕಾರವನ್ನು ಮತ್ತು ಸಾರ್ವಜನಿಕರನ್ನು ಹಾದಿ ತಪ್ಪಿದ್ದಾರೆ ಎಂದು ನೇರವಾಗಿ ಆರೋಪಿದ್ದಾರೆ.
ನಿಂಬಾಳ್ಕರ್ ಅವರ ಸ್ಪಷ್ಟನೆ ಸುಳ್ಳಿನಿಂದ ಕೂಡಿದೆ. ಸಾರ್ವಜನಿಕರನ್ನು ಮತ್ತು ಸರ್ಕಾರವನ್ನು ಧಿಕ್ಕು ತಪ್ಪಿಸುತ್ತಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಕರೆದಿರುವ ಮೂರನೇ ಟೆಂಡರ್ ನಲ್ಲೂ ನಿಯಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ರೂಪಾ ಅವರು ವಿವರಣೆ ನೀಡಿದ್ದಾರೆ.
ಇಲ್ಲಿ ನಿರ್ಭಯ ನಿಧಿಯ ಸೇಫ್‌ಟಿ ಯೋಜನೆಯ ಟೆಂಡರ್ ಮೊತ್ತ ೬೨೦ ಕೋಟಿ ರೂ. ಅದರ ಪ್ರಕಾರ ಬಿಡ್ ಮಾಡುವ ಕಂಪನಿ ವಾರ್ಷಿಕ ವಹಿವಾಟು ೧೨೦೦ ಕೋಟಿ ರೂ. ಇರಬೇಕು. ಬಿಡ್ ಮಾಡುವ ಕಂಪನಿಗೆ ಕೇವಲ ವಾರ್ಷಿಕ ೨೫೦ ಕೋಟಿ ರೂ. ವಹಿವಾಟು ನಡೆರುವ ಕಂಪನಿ ಬಿಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇತ್ತೀಚಿನ ತಿದ್ದುಪಡಿ ಪ್ರಕಾರ ಟೆಂಡರ್ ಮೊತ್ತದಷ್ಟು ಎಂದರೂ ಕನಿಷ್ಠ  ೫೦೦ ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿರುವ ಕಂಪನಿ ಬಿಡ್ ಸಲ್ಲಿಸಲು ಅರ್ಹತೆ ನಿಗಧಿ ಪಡಿರಬೇಕು ಹಣಕಾಸು ಇಲಾಖೆಯ ನಿರ್ದೇಶನ ಸಂಪೂರ್ಣ ಉಲ್ಲಂಘನೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos