ಎನ್ ಆರ್ ಸಿ ಜಾರಿಗೆ ಒತ್ತಾಯ

ಎನ್ ಆರ್ ಸಿ ಜಾರಿಗೆ ಒತ್ತಾಯ

ಬೆಂಗಳೂರು, ಜ.14: ಕೇಂದ್ರ ಸರಕಾರ ಸಿಎಎ ಮತ್ತು ಎನ್ ಆರ್ ಸಿಯನ್ನು ಯಾರ ಒತ್ತಡಕ್ಕೂ ಮಣಿಯದೇ ಜಾರಿಗೆ ತರಬೇಕು ಎಂದು ಅಖಿಲ‌ ಭಾರತ ಹಿಂದೂ‌ ಮಹಾಸಭಾ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷ ಡಿ. ವಿವೇಕಾನಂದ ಸ್ವಾಮಿ, ಭಾರತ ಹಲವಾರು ಧರ್ಮ, ಭಾಷೆ, ಜೀವನ ಪದ್ಧತಿಯನ್ನು ಒಳಗೊಂಡಂತಹ ದೇಶವಾಗಿದ್ದು, ಇಲ್ಲಿನ ನಾಗರೀಕ ರಿಜಿಸ್ಟರ್ ಅತ್ಯಾವಶ್ಯಕವಾಗಿದೆ. ಪಾಕಿಸ್ತಾನ, ಬಾಂಗ್ಲದೇಶ ಹಾಗೂ ನೇಪಾಳದಿಂದ ಅನಿಧಿಕೃತ ವಲಸಿಗರು ಭಾರತದಾದ್ಯಂತ ಬಂದು ನಲೆಸಿದ್ದಾರೆ. ಇವರಲ್ಲಿ ಅನೇಕರು ಸಮಾಜಘಾತುಕ ಶಕ್ತಿಗಳಾಗಿ ಬೆಳೆಯುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನು ದೇಶದ ಆಚೆ ಹಾಕುವ ಕೆಲಸವಾಗಬೇಕು ಎಂದು ತಿಳಿಸಿದರು.

ದೆಹಲಿಯಲ್ಲಿರುವ ಜವಹಾರಲಾಲ್ ನೆಹರು ಯುನಿವರ್ಸಿಟಿ ಯನ್ನು ಅನಿರ್ಧಿಷ್ಟ ಕಾಲ ಮುಚ್ಚಬೇಕು. ಅಲ್ಲಿನ ವಿದ್ಯಾರ್ಥಿಗಳಿಗೆ ಬೇರೆ ವಿಶ್ವವಿದ್ಯಾಲಯದಲ್ಲಿ ಅವಕಾಶ‌ ಮಾಡಿಕೊಡಬೇಕು. ಸಿಎಎ ಮತ್ತು ಎನ್ ಆರ್ ಸಿಯನ್ನು ವಿರೋಧಿಸುವ ರಾಜಕಾರಣಿಗಳು, ರಾಜಕೀಯ ಪಕ್ಷಗಳು, ಚಲನಚಿತ್ರ ನಟನಟಿಯರು ಹಾಗೂ ಅಮತರಾಷ್ಟ್ರೀಯ ಬರಹಗಾರ್ತಿ‌ ಅರುಂಧತಿ ರಾಯ್ ಸೇರಿದಂತೆ ಮುಂತಾದವರನ್ನು ಕಾನೂನು ಚೌಕಟ್ಟಿನಲ್ಲಿ ಬಂಧಿಸಿ, ಜೈಲಿಗಟ್ಟಬೇಕು ಇಲ್ಲವೇ ಭಾರತದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಭಾರತದ ಆಂತರಿಕ ಮತ್ತು ಬಾಹ್ಯ ರಕ್ಷಣೆಯಲ್ಲಿ ತೊಡಗಿರುವ ಪೊಲೀಸ್ ಮತ್ತು ರಕ್ಷಣಾ ಪಡೆಗಳ ಮನೋಬಲ ವೃದ್ಧಿಗೊಳಿಸಿ, ಅವರಿಗೆ ಸರಿಯಾದ ಸವಲತ್ತನ್ನು ಕೇಂದ್ರ ಸರಕಾರ ನೀಡಬೇಕು. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ವಿಷಯದಲ್ಲಿ ಯಾವುದೇ ಬಾಹ್ಯ ಒತ್ತಡಕ್ಕೂ ಸಿಲುಕದೇ ಮುಂದುವರೆಯಬೇಕು ಹಾಗೂ ಸಾವರ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಬೇಕು ಎಂದು ಮನವಿ ಮಾಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos