ಲೋಕೋ ಪೈಲಟ್, ಸ್ಟೇಷನ್‌ ಕಂಟ್ರೋಲರ್‌ಗಳಿಗೆ ಸೋಂಕು

ಲೋಕೋ ಪೈಲಟ್,  ಸ್ಟೇಷನ್‌ ಕಂಟ್ರೋಲರ್‌ಗಳಿಗೆ ಸೋಂಕು

ಬೆಂಗಳೂರು:ಸೆಪ್ಟೆಂಬರ್ ೩೦ ನಮ್ಮ ಮೆಟ್ರೋದ ೨೮ ಮಂದಿ ಲೋಕೋ ಪೈಲಟ್‌ಗಳು ಹಾಗೂ ಸ್ಟೇಷನ್‌ ಕಂಟ್ರೋಲರ್‌ಗಳಿಗೆ ಕೊರೊನಾ ಸೋಂಕು ತಗುಲಿದೆ.

ಕೊರೊನಾ ಲಾಕ್‌ಡೌನ್ ಸಡಿಲಗೊಂಡ ಬಳಿಕ ಇದೀಗ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿರುವ ಈ ಹೊತ್ತಿನಲ್ಲಿ, ಲೋಕೋ ಪೈಲಟ್‌ಗಳಿಗೆ ಸೋಂಕು ತಗುಲಿರುವುದು ಪ್ರಯಾಣಿಕರನ್ನು ಮತ್ತಷ್ಟು ಆತಂಕ್ಕೀಡು ಮಾಡಿದೆ.

ಸೆಪ್ಟೆಂಬರ್ ೭ ರಿಂದ ನಮ್ಮ ಮೆಟ್ರೋ ಸಂಚಾರ ಆರಂಭಗೊಂಡಿತ್ತು. ಈ ಎಲ್ಲಾ ಪೈಲಟ್‌ಗಳಿಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ, ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಎಲ್ಲರನ್ನೂ ಗೃಹ ಬಂಧನದಲ್ಲಿರಿಸಲಾಗಿದೆ. ಕೆಲವರು ಆಸ್ಪತ್ರೆಯಲ್ಲಿದ್ದಾರೆ ಒಟ್ಟಿನಲ್ಲಿ ವೈದ್ಯರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.ಪ್ರತಿ ನಿತ್ಯವೂ ಲೋಕೋಪೈಲಟ್‌ಗಳ ಪರೀಕ್ಷೆ ಮಾಡಿಸುತ್ತದ್ದು, ಆರು ನಿಲ್ದಾಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸೋಂಕು ತಗುಲಿದೆ.

ಬೆಳಗ್ಗೆ ೭ ರಿಂದ ಸಂಜೆ ೯ ಗಂಟೆಯವರೆಗೆ ನಮ್ಮ ಮೆಟ್ರೋ ಸಂಚರಿಸಲಿದ್ದು, ೪೫೦ ಲೋಕೋ ಪೈಲಟ್‌ಗಳು ಹಾಗೂ ಸ್ಟೇಷನ್ ಕಂಟ್ರೋಲರ್‌ಗಳು ಕೆಲಸ ನರ‍್ವಹಿಸುತ್ತಾರೆ. ಕೆಲಸಕ್ಕೆ ಬರುವ ಮುನ್ನ ರ‍್ಮಲ್ ಸ್ಕ್ರೀನಿಂಗ್ ಹಾಗೂ ಟೆಂಪರೇಚರ್ ಚೆಕ್ ಮಾಡಲಾಗುತ್ತಿದೆ.ಈ ೨೩ ದಿನದಲ್ಲಿ ೬,೯೨,೨೬೯ ಮಂದಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಮರ‍್ಚ್ ೨೨ಕ್ಕೂ ಮೊದಲು ಪ್ರತಿನಿತ್ಯ ೫.೧ ಲಕ್ಷ ಮಂದಿ ಸಂಚರಿಸುತ್ತಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos