ಇಂಡೋ-ಪೆಸಿಫಿಕ್ ಯೋಜನೆಗೆ ಭಾರತದ ನೆರವಿನ ಅವಶ್ಯಕತೆ ಇದೆ

ಇಂಡೋ-ಪೆಸಿಫಿಕ್ ಯೋಜನೆಗೆ ಭಾರತದ ನೆರವಿನ ಅವಶ್ಯಕತೆ ಇದೆ

ವಾಷಿಂಗ್ಟನ್: ಇಂಡೋ-ಪೆಸಿಫಿಕ್ ಯೋಜನೆ ಪ್ರಜಾಪ್ರಭುತ್ವ ದೇಶಗಳ ನಡುವಿನ ಮುಕ್ತ ವ್ಯಾಪಾರಕ್ಕೆ ಅತ್ಯಂತ ಅವಶ್ಯಕವಾಗಿದೆ, ಇದು ಪರಸ್ಪರ ದೇಶಗಳ ಜನರನ್ನು ಬೆಸೆಯುವ ಯೋಜನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಡೋ-ಪೆಸಿಫಿಕ್ ಪ್ರದೇಶದ ಮೂಲಕ ವ್ಯಾಪಾರದ ಜೊತೆಗೆ ಈ ಪ್ರದೇಶದ ಭದ್ರತೆಯಲ್ಲೂ ಭಾರತ ಮಹತ್ತರವಾದ ಪಾತ್ರ ನಿರ್ವಹಿಸಬೇಕಿದೆ ಎಂದು ಸ್ಟೀಫನ್ ನುಡಿದಿದ್ದಾರೆ.

ಭಾರತ ಈ ನಿಟ್ಟಿನಲ್ಲಿ ಈಗಾಗಲೇ ಮುಂದಡಿ ಇಟ್ಟಿದ್ದು, ಮಲಬಾರ್ ನೌಕಾ ಸಮರಾಭ್ಯಾಸಕ್ಕೆ ಆಸ್ಟ್ರೇಲಿಯಾವನ್ನು ಆಹ್ವಾನಿಸುವ ಮೂಲಕ ಭಾರೀ ಮಹತ್ವದ ಸಾಮರಿಕ ನಿರ್ಧಾರ ಕೈಗೊಂಡಿದೆ. ಅಮೆರಿಕ, ಭಾರತ, ಆಸ್ಟ್ರೇಲಿಯಾ ಹಾಗೂ ಜಪಾನ್‌ ನಡುವಿನ ಘನಿಷ್ಠ ಸಾಮರಿಕ ಒಪ್ಪಂದವಾಗಿದ್ದು, ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ಮುಕ್ತ ವ್ಯಾಪಾರಕ್ಕಾಗಿ ಈ ನಾಲ್ಕು ದೇಶಗಳು ಟೊಂಕ ಕಟ್ಟಿ ನಿಂತಿವೆ ಎಂದು ಸ್ಟೀಫನ್ ಸ್ಪಷ್ಟಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos