ಜು.6 ಐದು ಶತಕ ಬಾರಿಸಿದ್ದ ರೋಹಿತ್ ಶರ್ಮಾ

ಜು.6 ಐದು ಶತಕ ಬಾರಿಸಿದ್ದ ರೋಹಿತ್ ಶರ್ಮಾ

ನವದೆಹಲಿ: ಜುಲೈ ೬ ¨ಭಾರತ ತಂಡದ ಕ್ರಿಕೆಟಿಗ ರೋಹಿತ್ ಶರ್ಮಾ ಅವರ ಪಾಲಿಗೆ ಸುದಿನ. ಏಕೆಂದರೆ ೨೦೧೯ ಜುಲೈ ೬ರಂದು ಐದನೇ ಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾದರು.
೨೦೧೯ ರ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಒಂದೇ ಸರಣಿಯಲ್ಲಿ ಐದಿ ಶತಕಗಳನ್ನು ಬಾರಿಸಿ ೬೪೮ ರನ್‌ಗಳನ್ನು ಕಲೆ ಹಾಕಿದ್ದರು.
ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಇಂಗ್ಲೆAಡ್, ಬಾಂಗ್ಲಾದೇಶ, ಶ್ರೀಲಂಕಾ ಈ ದೇಶಗಳ ವಿರುದ್ಧ ಶತಕ ಬಾರಿಸಿ ಜುಲೈ ೬ರನ್ನು ಅಚ್ಚಳಿಯದ ದಿನವನ್ನಾಗಿ ಮಾಡಿದ್ದಲ್ಲದೇ ಭಾರತೀಯರು ಹೆಮ್ಮೆ ಪಡುವಂತೆ ಆಟವಾಡಿ ಎಲ್ಲರ ಮನ ಗೆದ್ದರು.
ವಿಶ್ವಕಪ್ ಸರಣಿಯಲ್ಲಿ ಶ್ರೀಲಂಕಾದ ಕ್ರಿಕೆಟಿಗ ಕುಮಾರ್ ಸಂಗಕ್ಕರ ಅವರು ನಾಲ್ಕು ಶತಕ ಬಾರಿಸಿದ್ದರು. ಇವರ ದಾಖಲೆಯನ್ನು ಮುರಿದ ರೋಹಿತ್ ಶರ್ಮಾ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದರು.

ಫ್ರೆಶ್ ನ್ಯೂಸ್

Latest Posts

Featured Videos