ದೆಹಲಿ ಸುತ್ತಮುತ್ತ ಮಳೆ: ಹವಮಾನ ಇಲಾಖೆ ಮುನ್ಸೂಚನೆ

ದೆಹಲಿ ಸುತ್ತಮುತ್ತ ಮಳೆ: ಹವಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ಭಾರತೀಯ ಹವಾಮಾನ ಇಲಾಖೆ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ.

ಕಳೆದ ಕೆಲ ದಿನಗಳಿಂದ ಶೀತದಿಂದ ಹಾಗೂ ಮೋಡ ಕವಿದ ವಾತಾವರಣ ಇದೆ. ದೆಹಲಿ ಕಳೆದ ಕೆಲ ತಿಂಗಳಿಂದ ಅತ್ಯಂತ ಹದಗೆಟ್ಟಿದ್ದ ವಾತಾವರಣ ಅಲ್ಪ ಪ್ರಮಾಣದಲ್ಲಿ ಸುಧಾರಿಸಿದೆ.

ಕನಿಷ್ಟ ತಾಪಮಾನ 6 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಿದೆ. ಗರಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಿದ್ದಾಗಿ ಹವಾಮಾನ ಇಲಾಖೆ ವರದಿ ಬಿಡುಗಡೆ ಮಾಡಿದೆ. ಹೆಚ್ಚಿನ ಪ್ರಮಾಣದಲ್ಲಿ ಮಂಜು ಕವಿದಿದ್ದು, ಈ ನಿಟ್ಟಿನಲ್ಲಿ ಹಲವು ರೈಲ್ವೇ ಸೇವೆಯಲ್ಲಿ ವ್ಯತ್ಯಯವಾಗಿದೆ.

ಮುಂದಿನ ಕೆಲವು ದಿನಗಳ ಕಾಲ ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಗೆ ಉಷ್ಣಾಂಶ ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಉತ್ತರ ವಲಯದಿಂದ ಅತ್ಯಂತ ಶೀತ ಮಾರುತಗಳು ಬೀಸಲಿದ್ದು, ಇದರ ಪರಿಣಾಮ ದಿಲ್ಲಿ, ಪಂಜಾಬ್, ಹರ್ಯಾಣದಲ್ಲಿ ಹೆಚ್ಚಿನ ತೀವ್ರತೆಯ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos