ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ನಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ 33ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಕುಸಲ್ ಮೆಂಡಿಸ್ ನೇತೃತ್ವದ ಶ್ರೀಲಂಕಾ ಮುಖಾಮುಖಿ ಆಗಲಿದೆ. ಇಂದಿನ ಮ್ಯಾಚ್ ಗೆದ್ದರೆ ಅಧಿಕೃತವಾಗಿ ಸೆಮಿ ಫೈನಲ್ಗೆ ಏರಲಿದೆ. ಇತ್ತ ಶ್ರೀಲಂಕಾ ಬಹುತೇಕ ಟೂರ್ನಿಯಿಂದ ಹೊರಬಿದ್ದಾಗಿದೆ.
ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದ ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗ ಎಂದು ಹೇಳಬಹುದು. ಬೌಂಡರಿಗಳು ತುಂಬಾ ಚಿಕ್ಕದಿರುವ ಕಾರಣ ರನ್ ಬರುತ್ತದೆ. ಆದಾಗ್ಯೂ, ಬೌಲಿಂಗ್ ದೃಷ್ಟಿಕೋನದಿಂದ, ಪಿಚ್ ಸ್ಪಿನ್ನರ್‌ಗಳಿಗೆ ಸ್ವಲ್ಪ ಸಹಾಯ ಮಾಡುತ್ತದೆ. ಇಬ್ಬನಿಯ ಅಂಶವನ್ನು ಗಮನದಲ್ಲಿಟ್ಟುಕೊಂಡು ಟಾಸ್ ಗೆದ್ದ ನಂತರ ನಾಯಕರು ಮೊದಲು ಫೀಲ್ಡಿಂಗ್ ಮಾಡುವ ಸಾಧ್ಯತೆಯಿದೆ.