ಮೆಟ್ರೋದಲ್ಲಿ ಅಪ್ಪಿಕೊಂಡ ಜೋಡಿ

ಮೆಟ್ರೋದಲ್ಲಿ ಅಪ್ಪಿಕೊಂಡ ಜೋಡಿ

ನವದೆಹಲಿ, ಡಿ. 09 : ಇತೀಚೆಗಷ್ಟೇ ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಪರಸ್ಪರ ಚುಂಬಿಸಿಕೊಂಡು ಸುದ್ದಿಯಾದ ಬೆನ್ನಲ್ಲೇ ಇದೀಗ ಮತ್ತೊಂದು ಜೋಡಿ ಇದೇ ರೀತಿಯ ವರ್ತನೆಯನ್ನು ತೋರಿದೆ.
ಹೌದು. ದೆಹಲಿ ಮೆಟ್ರೋದಲ್ಲಿ ನಿಂತುಕೊಂಡಿದ್ದ ಜೋಡಿಯೊಂದು ಏಕಾಏಕಿ ತಬ್ಬಿಕೊಂಡು ಮುದ್ದಾಡಿದ್ದು, ಪ್ರಯಾಣಿಕರನ್ನು ಅಸಹ್ಯಕ್ಕೀಡಾಗುವಂತೆ ಮಾಡಿದೆ. ಈ ಜೋಡಿ ಚಲಿಸುತ್ತಿರುವ ಮೆಟ್ರೋದಲ್ಲಿ ಪ್ರಯಾಣಿಕರಿದ್ದಾರೆ ಎಂಬುದನ್ನೂ ಮರೆತು ತಮ್ಮಷ್ಟಕ್ಕೆ ತಾವೇ ಮೈಮರೆಯವಲ್ಲಿ ಬ್ಯುಸಿಯಾಗಿದ್ದಾರೆ
ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ತನ್ನ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಬಳಿಕ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ಮೆಟ್ರೋ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೆ ಶೀಘ್ರವೇ ಈ ಜೋಡಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮೆಟ್ರೋ ರೈಲಿನೊಳಗೆ ಪ್ರಯಾಣಿಕರ ಮಧ್ಯೆ ನಿಂತುಕೊಂಡ ಜೋಡಿ ಪರಸ್ಪರ ಅಪ್ಪಿಕೊಂಡು ಕಿಸ್ ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ವಾತ್ಸಲ್ಯವನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos