ಆಸ್ಪತ್ರೆಯಲ್ಲಿ : ತಪ್ಪಿದ ದುರಂತ

  • In State
  • August 7, 2021
  • 141 Views
ಆಸ್ಪತ್ರೆಯಲ್ಲಿ : ತಪ್ಪಿದ ದುರಂತ

ಮುಂಬೈ: ಚಿಂಚ್ಪೋಕಲಿ ಪ್ರದೇಶದಲ್ಲಿರುವ, ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಆಡಳಿತಕ್ಕೊಳಪಟ್ಟ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶನಿವಾರ ಎಲ್ಪಿಜಿ ಸೋರಿಕೆಯಾಗಿ ಆತಂಕಕ್ಕೆ ಕಾರಣವಾಯಿತು. 20 ಮಂದಿ ಕೋವಿಡ್ ಸೋಂಕಿತರೂ ಸೇರಿದಂತೆ 58 ರೋಗಿಗಳು ಆಸ್ಪತ್ರೆಯಲ್ಲಿದ್ದರು. ಬೆಳಿಗ್ಗೆ 11.34ರ ವೇಳೆಗೆ ಎಲ್ಪಿಜಿ ಸೋರಿಕೆಯಾಗಿದೆ. ಇದು ರೋಗಿಗಳಲ್ಲಿ, ಅವರ ಕುಟುಂಬದವರಲ್ಲಿ, ಆಸ್ಪತ್ರೆ ಸಿಬ್ಬಂದಿಯಲ್ಲಿ ಆತಂಕಕ್ಕೆ ಕಾರಣವಾಯಿತು ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಸುರಕ್ಷತಾ ಕ್ರಮವಾಗಿ ಎಲ್ಲರನ್ನೂ ಸ್ಥಳಾಂತರಿಸಲಾಗಿದೆ. ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos