ಕಾಫಿನಾಡಿನಲ್ಲಿ ಬೆಳ್ಳಕ್ಕಿಗಳ ಕಲರವ

ಕಾಫಿನಾಡಿನಲ್ಲಿ ಬೆಳ್ಳಕ್ಕಿಗಳ ಕಲರವ

ಚಿಕ್ಕಮಗಳೂರು, ನ. 25 : ಚಿವ್ ಚಿವ್ ಎನ್ನುವ ಮರಿ ಹಕ್ಕಿಗಳ ನಿನಾದದ ಜೊತೆ ಅತ್ತಿಂದತ್ತ ಇತ್ತಿಂದತ್ತ ಮರದಿಂದ ಮರಕ್ಕೆ ಹಾರಾಡುವ ಬೆಳ್ಳಕ್ಕಿಗಳ ರಂಗಿನಾಟ ಮತ್ತಷ್ಟು ಸುಂದರವಾಗಿದೆ.

ಬಾಳೆಹೊನ್ನೂರು ಸಮೀಪವಿರುವ ಗ್ರಾಮದ ವಿನಾಯಕ ಕೆರೆಯ ಅಂಗಳದಲ್ಲಿರುವ ಮರಗಳಲ್ಲಿ ನೆಲೆಸಿರುವ ಬೆಳ್ಳಕ್ಕಿ ಆಗರ ತಾಣ. ಕಾಫಿನಾಡನಲ್ಲಿ ಬೆಳ್ಳಕ್ಕಿ ಪ್ರಪಂಚ ಸೃಷ್ಟಿ ಆಗುತ್ತಿದೆ.
ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಇಟ್ಟಿಗೆ ಸೀಗೋಡು ಗ್ರಾಮದ ಬಾಳೆಹೊನ್ನೂರು ಸಮೀಪವಿರುವ ಗ್ರಾಮದ ವಿನಾಯಕ ಕೆರೆಯ ಅಂಗಳದಲ್ಲಿರುವ ಮರಗಳಲ್ಲಿ ನೆಲೆಸಿರುವ ಬೆಳ್ಳಕ್ಕಿಗಳ ಹಿಂಡು ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ.
ಚಳಿಗಾಲದಲ್ಲಿ ಸುತ್ತಮುತ್ತಲ ಬತ್ತದ ಗದ್ದೆ, ಹಳ್ಳ-ಕೊಳ್ಳಗಳಲ್ಲಿ ಮೀನು, ಸಣ್ಣ-ಪುಟ್ಟ ಕೀಟಗಳನ್ನು ತಿಂದು ವಿನಾಯಕ ಕೆರೆಯ ಅಂಗಳದಲ್ಲಿರುವ ಮರಗಳಲ್ಲಿ ಸಾವಿರಾರು ಬೆಳ್ಳಕ್ಕಿಗಳು ಆಶ್ರಯ ಪಡೆದಿವೆ. ಬೆಳಗ್ಗಿನ ಜಾವ 6 ಗಂಟೆ ಹಾಗೂ ಸಂಜೆ 6ರ ವೇಳೆಯ ಆಸುಪಾಸಿನಲ್ಲಿ ಹಸಿರು ಚೆಲ್ಲಿ ನಿಂತಿರುವ ಮರಗಳ ಮೇಲೆ ಒಮ್ಮೆಲೆ ಸಾವಿರಾರು ಬೆಳ್ಳಕ್ಕಿಗಳು ಹಾರಾಡುವ ದೃಶ್ಯ ನೋಡುಗರ ಮನಸ್ಸಿಗೆ ಮುದ ನೀಡುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos