ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿ

ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಿ

ದೇವದುರ್ಗ: ತಾಲೂಕಿನ ಜಾಲಹಳ್ಳಿಯ ವ್ಯಾಪ್ತಿಯ ಪಲಕನಮರಡಿ ಗ್ರಾಮ ಪಂಚಾಯಿತಿಗೆ ಬರುವ ಎಲ್ಲಾ ಹಳ್ಳಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಒತ್ತಾಯಿಸಿ ಹಾಗೂ ಸಮರ್ಪಕವಾಗಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಪಂಚಾಯಿತಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಪಲಕನಮರಡಿ ಗ್ರಾಮದಲ್ಲಿ ಹೂಳು ತುಂಬಿಕೊಂಡಿರುವ ಎಲ್ಲ ಚರಂಡಿಯನ್ನು ಕೂಡಲೇ ಹೂಳು ತೆಗೆಯಬೇಕು, ಪಲಕನಮರಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಲಾದ ಶೌಚಾಲಯ ಅರ್ಥಕ್ಕೆ ನಿಂತಿದ್ದು ಕೂಡಲೇ ಶೌಚಾಲಯ ಸಂಪೂರ್ಣ ಮುಗಿಸಿ ವಿದ್ಯಾರ್ಥಿಗಳೇ ಅನುಕೂಲ ಮಾಡಿಕೊಡಬೇಕು, ಉದ್ಯೋಗ ಖಾತ್ರಿ ಕೆಲಸವನ್ನು ಕೆಲವರಿಗೆ ಮಾತ್ರ ಸೀಮಿತವಾಗಿದೆ. ಯೋಜನೆಯಡಿಯಲ್ಲಿ ತಾರತಮ್ಯ ಮಾಡುತ್ತಿರುವುದು ನಿಲ್ಲಿಸಿ ಎಲ್ಲರಿಗೂ ಸಮರ್ಪಕವಾಗಿ ಕೆಲಸ ಕೊಡಬೇಕು, ರೈತರ ಹೊಲ ಗದ್ದೆಗಳಿಗೆ ಸಂಭಂದಿಸಿದ ಕೆಲಸಗಳು ದನದ ಶೆಡ್ ಕುರಿ ಶೆಡ್ ಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಆದರೆ ಪ್ರತಿಭಟನೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಮಧ್ಯಾಹ್ನ ಮೂರು ಗಂಟೆ ಆದರೂ ಬರಲಾರದೆ ನಿರ್ಲಕ್ಷ್ಯ ಮಾಡಿದ ಘಟನೆ ಕಂಡುಬಂತು, ಪ್ರತಿಭಟನಾಕಾರರು ಅಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು ಕೊನೆಗೂ ಮೂರು ಗಂಟೆಗೆ ತಾಲೂಕು ಪಂಚಾಯಿತಿಯಿಂದ ಅಧಿಕಾರಿ ಸಂಗಪ್ಪ ಅವರು ಪ್ರತಿಭಟನ ಸ್ಥಳಕ್ಕೆ ಬಂದು ಪ್ರತಿಭಟನಾಕಾರರಿಗೆ ಆದಷ್ಟು ಬೇಗ ಈ ನಿಮ್ಮ ಬೇಡಿಕೆಗಳನ್ನು ನಮ್ಮ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಸುತ್ತೇನೆ ಎಂದು ಹೇಳಿ ಮನವಿ ಪತ್ರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ನರಸಣ್ಣ ನಾಯಕ, ಉಪಾಧ್ಯಕ್ಷ ಶಬ್ಬೀರ್ ಜಾಲಹಳ್ಳಿ, ಗ್ರಾಮ ಘಟಕ ಅಧ್ಯಕ್ಷ ಹನುಮಂತ ಗುರಿಕಾರ, ದಲಿತ ಸಂಘಟನೆ ಮುಖಂಡ ಶಿವಪ್ಪ ಪಲಕನಮರಡಿ, ಹನುಮಂತ ಮಂಡಲಗುಡ್ಡ, ಮುಕ್ಕಣ್ಣಗೌಡ,  ದೇವಪ್ಪ, ಸೋಮನಾಥ್, ಅಮರೇಶ, ನಾಗಪ್ಪ, ಅಯ್ಯಣ್ಣ ಸ್ವಾಮಿ, ನಿಂಗಪ್ಪ, ಯಲ್ಲಪ್ಪ, ಮೈಬುಬೂ, ಮತ್ತು ಪೋಲಿಸ್ ಸಿಬ್ಬಂದಿಗಳು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos