ಐಐಟಿ ವಿದ್ಯಾರ್ಥಿ ಬಂಧನ.!

ಐಐಟಿ ವಿದ್ಯಾರ್ಥಿ ಬಂಧನ.!

ಮಹಾರಾಷ್ಟ್ರ: ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಕಳ್ಳತನದಿಂದ ಚಿತ್ರೀಕರಿಸುತ್ತಿದ್ದ ಬಾಂಬೆ ಐಐಟಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಂಬೆ ಥಾಣೆ ನಿವಾಸಿ, ಐಐಟಿ ವಿದ್ಯಾರ್ಥಿ ಅವಿನಾಶ್ ಯಾದವ್ ಎಂಬಾತನ ವಿರುದ್ಧ ಸೆಕ್ಷನ್ 345ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಶುಕ್ರವಾರ
ರಾತ್ರಿ ತಾನು ಸ್ನಾನ ಮಾಡುತ್ತಿದ್ದ
ವೇಳೆ ಬಾತ್ ರೂಂನಲ್ಲಿ ಮೊಬೈಲ್
ಫೋನ್ ಇಟ್ಟಿರುವುದನ್ನು ಗಮನಿಸಿದ ಮಹಿಳೆ, ಈ
ವಿಷಯವನ್ನು ಪತಿಗೆ ತಿಳಿಸಿದ್ದರು. ಈ
ಸಂದರ್ಭದಲ್ಲಿ ಹೊರಗಡೆ ಬಂದಾಗ ಆರೋಪಿ
ಹಿಂಬದಿಯಿಂದ ಓಡಿ ಹೋಗುತ್ತಿರುವುದನ್ನು ಗಮಿಸಿದ್ದರು.
ಈತ ಓಡಿ ಹೋಗುತ್ತಿದ್ದಾಗ ಸ್ಥಳೀಯ
ನಿವಾಸಿಗಳು ಆತನನ್ನು ಸೆರೆ ಹಿಡಿದಿದ್ದರು.

ಆತನ ಮೊಬೈಲ್ ಫೋನ್ ನಲ್ಲಿ
ಮಹಿಳೆಯರ ಕ್ಲಿಪ್ಪಿಂಗ್ಸ್ ಗಳಿದ್ದವು. ಆರೋಪಿಯನ್ನು ಸ್ಥಳೀಯರು ಪೊಲೀಸರ ವಶಕ್ಕೆ ಒಪ್ಪಿಸಿದ್ದು,
ಈ ಕುರಿತು ದಂಪತಿ
ಕಾಪುರ್ ಬೌಡಿ ಪೊಲೀಸರಿಗೆ ದೂರು
ನೀಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos