ಇದರ ಬೆಲೆ ಕೆಳಿದರೆ ಕಣ‍್ಣಿರು ಬರುತ್ತೆ

ಇದರ ಬೆಲೆ ಕೆಳಿದರೆ ಕಣ‍್ಣಿರು ಬರುತ್ತೆ

ಹುಬ್ಬಳ್ಳಿ, ಡಿ .03: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಈರುಳ‍್ಳಿಯ ಬೆಲೆ ರೈತರಿಗೆ ಸಂತಸ ಕೊಟ್ಟರೆ,  ಈರುಳ‍್ಳಿ ಖರೀದಿದಾರರಿಗೆ ಕಣ‍್ಣಿರು ತರಿಸುತ್ತಿದೆ. ಹೌದು, ಹುಬ್ಬಳ್ಳಿ ಎಪಿಎಂಸಿಯಲ್ಲಿ ನೆನ್ನೆ ಈರುಳ‍್ಳಿ ಬೆಲೆ ದಾಖಲೆಯ  ಮಟ್ಟಕ್ಕೇರಿದೆ. ಉತ್ತಮ ಈರುಳ್ಳಿ ಬೆಲೆ ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 9200 ರೂ.ಗೆ ತಲುಪಿದೆ.

ಹುಬ್ಬಳ್ಳಿ ಎಪಿಎಂಸಿಯಲ್ಲಿ ಈರುಳ್ಳಿಗೆ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಬೆಲೆ ದೊರಕಿದ್ದು, ಬೆಳೆಗಾರರು ಬಂಪರ್ ಹೊಡೆದಿದ್ದಾರೆ. ಬರ ಹಾಗೂ ನೆರೆಯಿಂದಾಗಿ ಈರುಳ್ಳಿ ಬೆಳೆ ನೆಲ ಕಚ್ಚಿದ್ದರಿಂದ ಆವಕ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದೆ.

ಇದರ ಪರಿಣಾಮ ಬೆಲೆ ಏರುಮುಖವಾಗಿದ್ದು, ಬೆಳಗ್ಗೆ ಟೆಂಡರ್ ನಡೆಯುತ್ತಿದ್ದಂತೆ ಮಳಿಗೆಯೊಂದರಲ್ಲಿ ಅತ್ಯುತ್ತಮ ಈರುಳ್ಳಿಗೆ ಖರೀದಿದಾರರು ಗರಿಷ್ಠ 9200 ರೂ. ವರೆಗೂ ದರ ಕೂಗಿದರು.

 

ಫ್ರೆಶ್ ನ್ಯೂಸ್

Latest Posts

Featured Videos