ನಾನು ಮತ್ತು ಗುಂಡ ಚಿತ್ರ ಮರೆಯಲಾಗದ ಕಥೆ

ನಾನು ಮತ್ತು ಗುಂಡ ಚಿತ್ರ ಮರೆಯಲಾಗದ ಕಥೆ

ಬೆಂಗಳೂರು, ಜ. 24: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸಬರ ಹಾವಳಿ ಹೆಚ್ಚಾಗಿದ್ದು, ನಾನು ಮತ್ತು ಗುಂಡ ಚಿತ್ರವು ಪ್ರೇಕ್ಷಕರ ಮನಗೆದ್ದಿದೆ.

ನಾನು ಮತ್ತು ಗುಂಡ ಚಿತ್ರದ ಟ್ಯಾಗ್ ಲೈನ್ ಹೇಳುವಂತೆ ನಿಜಕ್ಕೂ ಇದೊಂದು ಮರೆಯಲಾಗದ ಕಥೆ. ಪ್ರಾಣಿ ಪ್ರಿಯರಿಗೆ, ಅದ್ರಲ್ಲೂ ನಾಯಿಯನ್ನ ಸಾಕಿರೋರಿಗೆ ಅದರ ನಿಯತ್ತು ಪ್ರೀತಿ ಗೊತ್ತಿರೋರ ಹೃದಯಸ್ಪರ್ಶಿಸುತ್ತೆ. ನಗುವಿನಿಂದ ಶುರುವಾಗಿ, ಕೌತುಕ ತಿರುವುಗಳೊಂದಿಗೆ, ಭಾವುಕಥೆಯ ಮಡುವಿನಲ್ಲಿ ಮುಳುಗಿ ತೇಲಿಸೋ ಭಾವನಾತ್ಮಕ ಸಿನಿಮಾ ನಾನು ಮತ್ತು ಗುಂಡ.

ರಘುಹಾಸನ್ ಮತ್ತು ಶ್ರೀನಿವಾಸ್ ತಿಮ್ಮಯ್ಯರ ಕಥೆ ಚಿತ್ರಕಥೆ ವಿಶಿಷ್ಠವಾಗಿದೆ. ಶ್ರೀನಿವಾಸ್ ತಿಮ್ಮಯ್ಯ ಚೊಚ್ಚಲ ಚಿತ್ರದಲ್ಲಿ ತಮ್ಮೊಳಗಿನ ಅಷ್ಟು ಸಿನಿಮೋತ್ಸಾಹವನ್ನ ಹೊರಹಾಕಿದ್ದಾರೆ. ತೆರೆ ಮೇಲೆ ಅದು ಕಾಣುತ್ತೆ. ಚಿತ್ರದ ಮುಖ್ಯ ಹೈಲೈಟ್ ಅಂದ್ರೆ ಕಥೆ ಮತ್ತು ಶಿವರಾಜ್ ಕೆ.ಆರ್ ಪೇಟೆ ಹಾಗೂ ಸಿಂಬಾ ( ಗುಂಡ)ನ ಅದ್ಭುತ ಪರ್ಫಾರ್ಮೆನ್ಸ್. ಶಿವರಾಜ್ ಕೆ.ಆರ್ ಪೇಟೆ ಮತ್ತು ಸಿಂಬಾ ನಡುವಿನ ಬಾಂಡಿಂಗ್ ಅದ್ಭುತ ಅನ್ನಿಸುತ್ತೆ.

 

ಫ್ರೆಶ್ ನ್ಯೂಸ್

Latest Posts

Featured Videos