ಪತಿಯಿಂದಲೇ ಪತ್ನಿಯ ಕೊಲೆ

  ಪತಿಯಿಂದಲೇ ಪತ್ನಿಯ ಕೊಲೆ

ಮಂಗಳೂರು : ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಕಾವೂರು ಪೊಲೀಸ್  ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಶಾಂತಾ ಮಣಿಯಾನಿ (40) ಹತ್ಯೆಗೀಡಾದ ಮಹಿಳೆ. ಈಕೆಯ ಗಂಡ ಕೊಲೆಗೈದ ಆರೋಪಿ. ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.  ಪತಿ ಪತ್ನಿಯಲ್ಲಿ ಜಗಳ ಉಂಟಾಗಿ ಸಿಟ್ಟಿನಿಂದ ಹೆಂಡತಿಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಹತ್ಯೆ ನಡೆಸಿದ ಬಳಿಕ ತಾನೇ ಕರೆ ಮಾಡಿ ಪೊಲೀಸರಿಗೆ‌ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಕಾವೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos