ಟೆಸ್ಟ್ ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಟೆಸ್ಟ್ ನಲ್ಲಿ ಆಸ್ಟ್ರೇಲಿಯಾಕ್ಕೆ ಬೃಹತ್ ಮುನ್ನಡೆ

ಪರ್ತ್, ಡಿ. 16: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆ ಕಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿನ ತನ್ನ ಅಜೇಯ ದಾಖಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನಡೆದಿದೆ. ಮೊದಲ ಇನಿಂಗ್ಸ್ನ 250 ರನ್ ಸೇರಿದಂತೆ ಆಸೀಸ್ ಒಟ್ಟಾರೆ 417 ರನ್ ಮುನ್ನಡೆ ಕಂಡಿದೆ.
5 ವಿಕೆಟ್ಗೆ 109 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ಕಿವೀಸ್ ತಂಡ ವೇಗಿ ಮಿಚೆಲ್ ಸ್ಟಾರ್ಕ್ (52ಕ್ಕೆ 5) ಮಾರಕ ದಾಳಿಗೆ ತತ್ತರಿಸಿ 166 ರನ್ಗೆ ಆಲೌಟ್ ಆಯಿತು. ರಾಸ್ ಟೇಲರ್ ಸರ್ವಾಧಿಕ 80 ರನ್ ಬಾರಿಸಿದರು. 200ಕ್ಕಿಂತ ಹೆಚ್ಚು ಮುನ್ನಡೆ ಕಂಡ ಆಸೀಸ್ಗೆ ಫಾಲೋಆನ್ ಹೇರುವ ಅವಕಾಶವಿದ್ದರೂ, ದ್ವಿತೀಯ ಇನಿಂಗ್ಸ್ ಆರಂಭಿಸಿ ದಿನದಂತ್ಯಕ್ಕೆ 6 ವಿಕೆಟ್ಗೆ 167 ರನ್ ಗಳಿಸಿದೆ.
ಆರಂಭಿಕ ಜೋ ಬರ್ನ್ಸ್ (53) ಮತ್ತು ಹ್ಯಾಟ್ರಿಕ್ ಶತಕವೀರ ಮಾರ್ನಸ್ ಲಬುಶೇನ್ (50) ಅರ್ಧಶತಕದಿಂದ ಆಸೀಸ್ ಉತ್ತಮ ಆರಂಭ ಕಂಡಿತು. ದಿನದಂತ್ಯದಲ್ಲಿ ಬಿರುಸಿನ ರನ್ ಪೇರಿಸಲು ಯತ್ನಿಸಿದ ಆಸೀಸ್ 29 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು.
ಆಸ್ಟ್ರೇಲಿಯಾ: 416 ಮತ್ತು 57 ಓವರ್ಗಳಲ್ಲಿ 6 ವಿಕೆಟ್ಗೆ 167 (ವಾರ್ನರ್ 19, ಬರ್ನ್ಸ್ 53, ಲಬುಶೇನ್ 50, ಸ್ಮಿತ್ 16, ವೇಡ್ 8*, ಕಮ್ಮಿನ್ಸ್ 1*, ಸೌಥಿ 63ಕ್ಕೆ 4, ವ್ಯಾಗ್ನರ್ 40ಕ್ಕೆ 2),
ನ್ಯೂಜಿಲೆಂಡ್: 55.2 ಓವರ್ಗಳಲ್ಲಿ 166 (ಟೇಲರ್ 80, ಗ್ರಾಂಡ್ಹೋಮ್ 23, ಸ್ಟಾರ್ಕ್ 52ಕ್ಕೆ 5, ಲ್ಯಾನ್ 48ಕ್ಕೆ 2).

ಫ್ರೆಶ್ ನ್ಯೂಸ್

Latest Posts

Featured Videos