ಬೆಂಗಳೂರು: ವಾಹನ ಸವಾರರೇ ಗಮನಿಸಿ. ನಿಮಗಿದೀಗ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದ್ದು HSRP ನಂಬರ್ ಪ್ಲೇಟ್ ಗಡುವು ವಿಸ್ತರಣೆ ಮಾಡಿದ್ದು ಇದೀಗ ನವೆಂಬರ್ 20 ರ ವರೆಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬದಲಾವಣೆಗೆ ಅವಕಾಶ ನೀಡಿದೆ.
ಹೌದು, ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿರುವ ಎಲ್ಲಾ ವಾಹನ ಸವಾರರು ತಮ್ಮ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕೆಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು ಅದರಂತೆ ಎಲ್ಲಾ ವಾಹನ ಸವಾರರು ತಮ್ಮ ವಾಹನಗಳಿಗೆ ಎಚ್ಎಸ್ಆರ್ ಪಿ ನಂಬರ್ ಅಳವಡಿಕೆಗೆ ಮುಂದಾಗಿದ್ದು ಇದೀಗ ಈ ಗಡುವನ್ನು ನಂಬರ್ 20- 2024ರ ವರೆಗೆ ವಿಸ್ತರಿಸಿದೆ. ಇದನ್ನೂ ಓದಿ: ಹಳೇ ಸಿದ್ದರಾಮಯ್ಯನವರು ಈಗಿಲ್ಲ: ವಿ ಸೋಮಣ್ಣ
ಹೈಕೋರ್ಟ್‌ನಿಂದ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವುನ್ನು ನ.20ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದಿಂದ ಈಗಾಗಲೇ ಎಲ್ಲ ಮೋಟಾರು ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳಲು 4 ಬಾರಿ ಗಡುವು ನೀಡಿತ್ತು. ಕೊನೆಯ ಬಾರಿ ಸೆ.14ರಂದು ಈ ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನವಾಗಿ ಗಡುವು ನೀಡಿತ್ತು. ಆದರೆ, ಈ ಬಗ್ಗೆ ಸೆ.18ರಂದು ವಿಚಾರಣೆ ಇದ್ದ ಹಿನ್ನೆಲೆಯಲ್ಲಿ ಕಳೆದ 4 ದಿನಗಳಿಂದ ಯಾವುದೇ ದಂಡವನ್ನು ವಿಧಿಸಿರಲಿಲ್ಲ. ಇಂದು (ಬುಧವಾರ ಸೆ.18) ರಂದು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ವಕೀಲರ ಮನವಿ ಮೇರೆಗೆ HSRP ನಂಬರ್ ಪ್ಲೇಟ್ ಅಳವಡಿಕೆ ಅವಧಿಯನ್ನು 2024ರ ನವೆಂಬರ್ 20ರ ವರೆಗೆ ಅವಧಿ ವಿಸ್ತಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಈವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಆತಂಕದಲ್ಲಿದ್ದ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದೆ.