ಹೃದಯ ಗೆದ್ದ ಅದಿತಿ

ಹೃದಯ ಗೆದ್ದ ಅದಿತಿ

ಟೋಕಿಯೋ : ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಒಲಿಂಪಿಕ್ಸ್ನಲ್ಲಿ  ಪದಕ ಗೆಲ್ಲುವ ಅವಕಾಶವನ್ನು ಜಸ್ಟ್ ಮಿಸ್ ಮಾಡಿಕೊಂಡಿದ್ದಾರೆ.  ನಿನ್ನೆ ನಡೆದ ಸೆಮಿಫೈನಲ್‌ನ ಪಂದ್ಯದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು,  ಸಾಕಷ್ಟು ಭರವಸೆ ಮೂಡಿಸಿ ಇಂದು ಕೊನೆಯ ಕ್ಷಣದಲ್ಲಿ ಪದಕ ಗೆಲ್ಲುವ ಅವಕಾಶ ಕಳೆದು ಕೊಂಡರು. ಬೆಳ್ಳಿ ಪದಕವನ್ನಾದರೂ ತಂದೇ ತರುತ್ತಾರೆ ಎಂಬ ನಿರೀಕ್ಷೆ ಇತ್ತು. ಅಂತಿಮ ಪಂದ್ಯದಲ್ಲಿ ನಿರಾಶೆ ಉಂಟಾಯಿತು.

ಬೆಂಗಳೂರಿನ ಯುವತಿ ಅಂತರಾಷ್ಟ್ರಿಯ ಮಟ್ಟದಲ್ಲಿ ಮಿಂಚಿದ್ದು ಗಮನಾರ್ಹವಾಗಿತ್ತು. ಅಂತಿಮ ಸುತ್ತಿನ ಪಂದ್ಯದಲ್ಲಿ ವಿಫಲರಾದರು. ಅಮೆರಿಕದ ನೆಲ್ಲಿ ಕರ್ಡಾ ಚಿನ್ನದ ಪದಕ ಪಡೆದರೆ, ಜಪಾನ್ನ ಇನೋಮ್ ಮೊನೆ ಬೆಳ್ಳಿ, ನ್ಯೂಜಿಲೆಂಡ್‌ನ ಲಿಡಿಯಾ ಕೋ ಕಂಚು ಪಡೆದುಕೊಂಡಿದ್ದಾರೆ. ಅದಿತಿ ೪ನೇ ಸ್ಥಾನ ಗಳಿಸುವ ಮೂಲಕ ಪ್ರತಿಯೊಬ್ಬರ ಗಮನ ಸೆಳೆದಿದ್ದಾರೆ.

ಆದಿತಿ ಅವರ ಆಟಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ, ಎಲ್ಲಾ ಭಾರತೀಯರಿಗಿಂತ ಅಧಿತಿ ಹೆಚ್ಚು ದೂರ ಕ್ರಮಿಸಿದ್ದು, ಚೆನ್ನಾಗಿ ಆಟ ಆಡಿ ಅವರು ತೋರಿಸಿದ ಕೌಶಲ್ಯ ಎಲ್ಲರ ಮನಸ್ಸನ್ನು ಗೆದ್ದಿದೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos