ಅಕ್ಷಯ್‌ಗೆ ಸಂಭಾವನೆ ಎಷ್ಟುಗೊತ್ತಾ?

ಅಕ್ಷಯ್‌ಗೆ ಸಂಭಾವನೆ ಎಷ್ಟುಗೊತ್ತಾ?

ಮುಂಬೈ, ಜ. 23: ಬಿ-ಟೌನ್‌ನಲ್ಲಿ ಸಖತ್ ಬ್ಯುಸಿಯಾಗಿರುವ ನಟ ಎಂದರೆ ಅದು ಅಕ್ಷಯ್ ಕುಮಾರ್. ಅಕ್ಷಯ್ ಕುಮಾರ್ ಅಭಿನಯದ 4 ಸಿನಿಮಾಗಳು ಬಿಡುಗಡೆಯಾಗಿವೆ. `ಮಿಷನ್ ಮಂಗಲ್’, `ಕೇಸರಿ’, `ಹೌಸ್‌ಫುಲ್ 4′ ಹಾಗೂ `ಗುಡ್ ನ್ಯೂಸ್’ ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳು. ಈ ಎಲ್ಲ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿವೆ.

ಇನ್ನು 2020ರಲ್ಲಿ ಅಕ್ಷಯ್ ಫುಲ್ ಪ್ಯಾಕ್ಡ್ ಆಗಿದ್ದಾರೆ. ದೊಡ್ಡ ಬ್ಯಾನರ್‌ಗಳ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಇದರ ನಡುವೆ ಅಕ್ಷಯ್ ಕುಮಾರ್ ಕುರಿತಂತೆ ಶಾಕಿಂಗ್ ಸುದ್ದಿ ಹರಿದಾಡುತ್ತಿದೆ. ಅದು ಅಕ್ಷಯ್ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ. ಅದರಲ್ಲೂ ಅವರು ಕೇಳಿರುವ ಸಂಭಾವನೆಯಲ್ಲಿ ಒಂದು ಸಿನಿಮಾವನ್ನೇ ನಿರ್ಮಿಸಬಹುದಾಗಿದೆ.

ಆನಂದ್ ಎಲ್ ರೈ ಅವರ ಸಿನಿಮಾದಲ್ಲಿ ಅಕ್ಷಯ್ ನಟಿಸಲಿದ್ದಾರೆ ಅನ್ನೋ ಸುದ್ದಿ ಇದೆ. ಆದರೆ ಈ ಸಿನಿಮಾಗಾಗಿ ಅಕ್ಷಯ್ ಬರೋಬ್ಬರೀ 120 ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾ ಸುದ್ದಿ ಪ್ರಕಟಿಸುವ ವೆಬ್‌ಸೈಟ್ ಒಂದು ಈ ಕುರಿತು ಸುದ್ದಿ ಮಾಡಿದೆ. ಆದರೆ ಈ ಕುರಿತಾಗಿ ಅಕ್ಷಯ್ ಹಾಗೂ ಸಿನಿಮಾ ನಿರ್ಮಾಪಕರಿಂದ ಯಾವುದೇ ಮಾಹಿತಿ ಸದ್ಯ ಲಭ್ಯವಾಗಿಲ್ಲ.

 

 

ಫ್ರೆಶ್ ನ್ಯೂಸ್

Latest Posts

Featured Videos