ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಖಾಕಿ

ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಖಾಕಿ

ಕುಷ್ಟಗಿ, ಫೆ. 14: ನಿನ್ನೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿಗೆ ಭೇಟಿ  ನೀಡಿದ ಸಂಧರ್ಭದಲ್ಲಿ  ಸಾರ್ವಜನಿಕರ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಸ್ಥಳದಲ್ಲಿ ಇದ್ದ ಎಸ್.ಪಿ ಜಿ. ಸಂಗೀತಾಗೆ ಆದೇಶ ನೀಡಿದ ಗೃಹ ಸಚಿವ. ಸಚಿವರ ಈ ಆದೇಶದ ಮೇರಿಗೆ ಜಿಲ್ಲಾ ಪೋಲಿಸ್  ವರಿಷ್ಠಅಧಿಕಾರಿಗಳು  ಎಲ್ಲಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಖಡಕ್ಕಾಗಿ ಆದೇಶ ಮಾಡಿದ್ದಾರೆ. ಈ ಆದೇಶದ ಮೇರಿಗೆ ಪೋಲಿಸ್ ಅಧಿಕಾರಿಗಳು ನಿನ್ನೆ ತಡ ರಾತ್ರಿ ವೇಳೆ ಕುಡಿದು ವಾಹನವನ್ನು ಚಲಾಹಿಸುತ್ತದ್ದ ಬೈಕ್ ಸಾವರರನ್ನು ಪೋಲಿಸರು ತಡೆದು ಕುಷ್ಟಗಿ ಪಟ್ಟಣದ ಮಾರುತಿ ಸರ್ಕಲ್‍ನಲ್ಲಿ ಪೋಲಿಸ್ ಅಧಿಕಾರಿಗಳಾದ ಸಿ.ಪಿ.ಐ ಜಿ.ಚಂದ್ರಶೇಖರ ಹಾಗೂ ಪಿಎಸ್‍ಐ ಚಿತ್ತರಂಜನ್ ಮತ್ತು ಸಿಬ್ಬಂದಿ ವರ್ಗದವರು ಕುಡುಕರಿಗೆ ಬಿಸಿ ಮುಟ್ಟಿಸಿದ ಘಟನೆ ನೆಡೆಯುತು.

ತಡ ರಾತ್ರಿ ವೇಳೆ ಕುಡಿದು ವಾಹನವನ್ನು ಚಾಲನೆ ಮಾಡುವವರು ಮತ್ತು ಇತರೆ  ಕಾನೂನುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವವರನ್ನು ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುವುದು ಮಾಡಿದರೆ ಅಂಥವರ ವಿರುದ್ಧ  ಶಿಸ್ತು ಕ್ರಮ ಜರುಗಿಸಲಾಗುತ್ತದೆ. ನಿನ್ನೆ ತಡ ರಾತ್ರಿ ವೇಳೆ ಕುಡಿದು ವಾಹನವನ್ನು ಚಲುಸುತ್ತಿದ್ದ ಬೈಕ್ ಸವಾರರನ್ನು ಹಿಡಿದು ದಂಡವನ್ನು ಹಾಕಿದ ಪ್ರಸಂಗ ನಡೆದಿದೆ.

ದೂರವಾಣಿ ಸಂಪರ್ಕದ ಮೂಲಕ ಮಾತನಾಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಜಿ.ಸಂಗೀತಾ ಇವರು ಜಿಲ್ಲೆಯ  ಪ್ರತಿ ಪೋಲಿಸ್ ಠಾಣೆ ಅಧಿಕಾರಿಗಳಿಗೆ ಆದೇಶವನ್ನು ಮಾಡಲಾಗಿದೆ. ಪ್ರತಿ ದಿನ ತಡ ರಾತ್ರಿಯಲ್ಲಿ ಯಾರು ಕುಡಿದು ವಾಹನವನ್ನು ಚಲುಸುತ್ತಾರೆ. ಅಂತಹವರನ್ನು ಪತ್ತೆ ಹಂಚಿ ಅವರಿಗೆ ದಂಡವನ್ನು ವಿಧಿಸುವ ಮೂಲಕ ಕಾನೂನಿನ ಪ್ರಕಾರ ಶಿಸ್ತು ಕ್ರಮವನ್ನು ಜರಗಿಸಬೇಕು ಎಂದು ಆದೇಶಸಿಸಲಾಗಿದೆ ಎಂದು ಹೇಳಿದರು.

ವರದಿ :- ಮಲ್ಲೇಶ್ ಎಲ್.ಪಿ.

ಫ್ರೆಶ್ ನ್ಯೂಸ್

Latest Posts

Featured Videos