ಬೆಂಗಳೂರು: ನಮ್ಮ ಸ್ಯಾಂಡಲ್ ನಲ್ಲಿ ಹಲವಾರು ಸಿನಿಮಾಗಳು ರಿಲೀಸ್ ಆಗುತ್ತದೆ. ಅದೇ ತರಹ ರಿಲೀಸ್ ಆದಂತಹ ಸಿನಿಮಾ ಹಾಸ್ಟೆಲ್ ಹುಡುಗ ಬೇಕಾಗಿದ್ದಾರೆ ಈ ಸಿನಿಮಾ ಅತ್ಯಂತ ಹೆಚ್ಚು ಜನಪ್ರಿಯಗೊಂಡಿದೆ, ಈ ಸಿನಿಮಾದಲ್ಲಿ ಎಲ್ಲಾ ಹೊಸಬರಿಂದಲೇ ಮೂಡಿದ ಸಿನಿಮಾ. ಈ ಸಿನಿಮಾವನ್ನು ನೋಡಿದ ಎಲ್ಲಾ ಪ್ರೇಕ್ಷಕರು ತುಂಬಾ ಚೆನ್ನಾಗಿದೆ ಎಂಬ ಮಾತುಗಳಾಡಿದ್ದರು.
ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ, ರಕ್ಷಿತ್ ಶೆಟ್ಟಿಯವರ ಪರಂವಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಗೊಂಡ ಈ ಸಿನಿಮಾ ಇವತ್ತಿಗೆ 50ನೇ ದಿನ ಸಂಭ್ರಮಾಚರಣೆಯಲ್ಲಿದೆ.
ಆರಂಭದಿಂದಲೇ ಸಿನಿಮಾ ತಂಡಕ್ಕೆ ಬೆನ್ನೆಲುಬಾಗಿ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ನಿಂತಿದ್ದರು. ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸಿನಿಮಾಕ್ಕೆ ಓಂಕಾರ ಹೇಳಿದ್ದೇ ಅಪ್ಪು. ಅಲ್ಲದೇ ಸಿನಿಮಾ ಪ್ರಚಾರವನ್ನು ವಿಭಿನ್ನವಾಗಿ ಆರಂಭ ಮಾಡಿದ್ದರು.
ಸಿನಿಮಾದ ಶೂಟಿಂಗ್ ಮಂಗಳೂರು ವಿಶ್ವವಿದ್ಯಾನಿಲಯದ ಬಾಯ್ಸ್ ಹಾಸ್ಟೆಲ್‌ನಲ್ಲಿ ನಡೆದಿದ್ದು, 500ಕ್ಕೂ ಹೆಚ್ಚಿನ ಯುವ ಪ್ರತಿಭೆಗಳು ನಟಿಸಿದ್ದಾರೆ. ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ರಿಷಬ್ ಶೆಟ್ಟಿ, ದಿವ್ಯ ಸ್ಪಂದನ, ನಿರ್ದೇಶಕ ಪವನ್‌ಕುಮಾರ್, ದಿಗಂತ್ ಮಂಚಾಲೆ, ಶೈನ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.