ಜೇನು ಸಾಕಾಣಿಕೆ ಮಾಹಿತಿ

ಜೇನು ಸಾಕಾಣಿಕೆ ಮಾಹಿತಿ

ರಾಮನಗರ, ಡಿ. 28: ಜೇನು ಕೃಷಿಯು ಒಂದು ಉಪಕಸುಬಾಗಿ ಕೈಗೊಳ್ಳಬಹುದಾದ ಹಾಗೂ ಜಮೀನಿನ ಬಡತನ, ನೀರಿನ ಆಸರೆ ಅಥವಾ ವಿದ್ಯುಚ್ಛಕ್ತಿಯ ಬಳಕೆ ಇಲ್ಲದೆ, ಅಲ್ಪ ಬಂಡವಾಳದಿಂದ ನಿರ್ವಹಿಸಬಹುದಾದ ಜನಪ್ರಿಯವಾಗುತ್ತಿರುವ  ಉದ್ದಿಮೆ. ಆಸಕ್ತ ರೈತರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಜೇನು ಕೃಷಿಗೆ ಅಗತ್ಯ ಮಾಹಿತಿ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿದೆ.

ಜೇನು ತುಪ್ಪವಲ್ಲದೆ ಜೇನುಮೇಣ, ರಾಜಶಾಹಿ ರಸ, ಜೇನು ವಿಷ ಮುಂತಾದವುಗಳನ್ನು ಪಡೆಯಬಹುದು. ಜೇನುತುಪ್ಪ ಅತ್ಯಂತ ಪುಷ್ಠಿಕರವಾದ ಒಂದು ಸಂಪೂರ್ಣ ಆಹಾರ. ಮನುಷ್ಯನ ದೇಹದಲ್ಲಿ ಸುಲಭವಾಗಿ ಜೀರ್ಣವಾಗುವುದರಿಂದ ಮಕ್ಕಳಿಗೆ ಹಾಗೂ ವೃದ್ಧರಿಗೆ ಅತ್ಯಂತ ಉಪಯುಕ್ತವಾಗಿರುವುದಲ್ಲದೆ, ಆಯುರ್ವೇದದಲ್ಲಿ ಔಷಧಿ ರೂಪದಲ್ಲಿ ಅನೇಕ ರೋಗಗಳಿಗೆ ಬಳಕೆಯಲ್ಲಿದೆ. ಜೇನಿನ ಮೇಣವು, ಮೇಣದ ಬತ್ತಿ, ಸೌಂದರ್ಯವರ್ಧಕಗಳು, ಬಣ್ಣ ಹಾಗೂ ಇನ್ಸುಲೇಟರ್‌ಗಳ ತಯಾರಿಕೆಗೆ ಉಪಯೋಗವಾಗುತ್ತದೆ. ಜೇನುನೊಣಗಳು ಸ್ರವಿಸುವ ಜೇನು ವಿಷವು ಕೀಲು ರೋಗಗಳನ್ನು ಗುಣಪಡಿಸುವಲ್ಲಿ ಅತ್ಯಂತ ಸಹಕಾರಿ.

ಭಾರತದಲ್ಲಿರುವ ವಿವಿಧ ಬಗೆಯ ಜೇನುಗಳಲ್ಲಿ ಹೆಜ್ಜೇನು, ಕೋಲ್ಜೇನು, ಮುಜೆಂಟಿ ಜೇನು, ತುಡುವೆ ಜೇನು ತಳಿಗಳನ್ನು ಕಾಣಬಹುದಾಗಿದೆ. ತುಡುವೆ ಜೇನು ಅಥವಾ ಪೊಟರೆ ಜೇನು ಮಾತ್ರ ಸಾಕಲು ಯೋಗ್ಯವಾಗಿದೆ. ಇತ್ತಿಚೆಗೆ ವಿದೇಶಿ ಹೊಸತಳಿಯಾದ ಮೆಲಿಪೊರಾ ತಳಿಯನ್ನು ಕರ್ನಾಟಕ ರಾಜ್ಯದಲ್ಲಿ ವಾಣಿಜ್ಯ ಉದ್ದಿಮೆಯಾಗಿ ಪರಿಚಯಿಸಲಾತ್ತಿದೆ.

ಜೇನು ಸಾಕಣೆ ಪ್ರಾರಂಭಿಸುವವರು, ಜೇನು ನೊಣಗಳ ಕುಟುಂಬ, ಸ್ವಭಾವ, ಜೇನು ಸಾಕಾಣಿಕೆ ಉಪಕರಣಗಳು, ಜೇನು ಕೃಷಿಗೆ ಉಪಯುಕ್ತ ಸಸ್ಯಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಶಿಫಾರಸ್ಸು ಮಾಡಿರುವ ಐ.ಎಸ್.ಐ ಜೇನು ಪೆಟ್ಟಿಗೆಗಳನ್ನೇ ಸಾಕಾಣೆಕೆಗೆ ಬಳಸಬೇಕು. ಜೇನು ಸಾಕಾಣಿಕೆ ಸ್ಥಳದಿಂದ ಒಂದು ಕಿ.ಮೀ. ಸುತ್ತಳತೆಯಲ್ಲಿ ವರ್ಷ ಪೂರ್ತಿಸಿಗುವಂತೆ ಹೂ ಬಿಡುವ ಸಸ್ಯ ಸಂಪತ್ತಿದ್ದು, ಮಾಲಿನ್ಯರಹಿತ ಗಾಳಿ ಮತ್ತು ನೀರು ದೊರೆಯುವಂತಿರಬೇಕು. ಜೇನು ಪೆಟ್ಟಿಗೆಗಳಿಗೆ ಮಳೆ, ಗಾಳಿ ಮತ್ತು ಬಿಸಿಲಿನಿಂದ ರಕ್ಷಣೆ ಇರಬೇಕು.ಜೇನು ಕುಟುಂಬಗಳನ್ನು ವಾರಕೊಮ್ಮೆ ಪರೀಕ್ಷಿಸುತ್ತಿರಬೇಕು. ಅಡಿಹಲಗೆಯನ್ನು 10-15 ದಿನಗಳಿಗೊಮ್ಮೆ ಸ್ವಚ್ಛ ಮಾಡಬೇಕು, ಯಾವುದೇ ಶತ್ರುವಿನ ಕಾಟಲಿಲ್ಲದಂತೆ ನೋಡಿಕೊಳ್ಳಬೇಕು.

 

ಫ್ರೆಶ್ ನ್ಯೂಸ್

Latest Posts

Featured Videos