ಗಂಟಲು ನೋವಿಗೆ ಮನೆಮದ್ದು

ಗಂಟಲು ನೋವಿಗೆ ಮನೆಮದ್ದು

ಬೆಂಗಳೂರು, ಜ. 24: ಸಾಮಾನ್ಯವಾಗಿ ಚಳಿಗಾಲ ಬಂತೆಂದರೆ ಕೆಲವರಿಗೆ ಗಂಟಲು ನೋವು ಕೆಮ್ಮು, ಶಿತ, ನೆಗಡಿ ಇನ್ನಿತರ ತೊಂದರೆಗಳು ಕಾಡಲು ಶುರುವಾಗುತ್ತದೆ. ಇಂತಹ ರೋಗಗಳಿಗೆ ವೈದ್ಯರನ್ನು ಸಂಪರ್ಕಿಸುವ ಮೊದಲು ನಾವು ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಉಪಯೋಗಿಸಿ ನಮ್ಮ ಕಾಯಿಲೆ ಕಡಿಮೆ ಮಾಡಬಹುದು.

ಗಂಟಲು ಕೆರೆತ, ಗಂಟಲಿನಲ್ಲಿ ನೋವು ಕಾಣಿಸಿಕೊಂಡರೆ ಮಾತನಾಡಲು, ಆಹಾರವನ್ನು ಸೇವಿಸಲು ತುಂಬಾ ಕಷ್ಟವಾಗುವುದು. ಸೋಂಕುಣುಗಳ ದಾಳಿಯಿಂದ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು. ಇನ್ನು ಕೆಲವರಿಗೆ ತಣ್ಣನೆಯ ವಸ್ತುಗಳನ್ನು ಸೇವಿಸಿದಾಗ, ಮೊಸರು ತಿಂದಾಗ, ಫ್ರಿಡ್ಜ್ನಲ್ಲಿಟ್ಟ ವಸ್ತುಗಳನ್ನು ಸೇವಿಸಿದಾಗ ಗಂಟಲು ಕೆರೆತ ಉಂಟಾಗುವುದು. ಈ ರೀತಿಯ ಗಂಟಲು ಕೆರೆತ ಹೋಗಲಾಡಿಸುವ ಕೆಲವೊಂದು ಮನೆಮದ್ದುಗಳು ತುಂಬಾ ಸಹಕಾರಿ.

ಬೆಳ್ಳುಳ್ಳಿ: ಗಂಟಲು ಕೆರೆತ ಹೋಗಲಾಡಿಸಲು ಬೆಳ್ಳುಳ್ಳಿ ಅತ್ಯುತ್ತವಾದ ಮನೆಮದ್ದಾಗಿದೆ. ಇದರಲ್ಲಿರುವ ಅಲೆಸಿನ್ ಅಂಶ ಗಂಟಲು ಕೆರೆತಕ್ಕೆ ಕಾರಣವಾದ ಬ್ಯಾಕ್ಟಿರಿಯಾಗಳನ್ನು ಕೊಂದು ಹಾಕುತ್ತದೆ. ಹಸಿ ಬೆಳ್ಳೂಳ್ಳಿಯ ಒಂದು ಎಸಳು ಬಾಯಿಗೆ ಹಾಕಿ ಮೆಲ್ಲನೆ ಜಗಿಯಿತ್ತಾ ಅದರ ರಸ ನುಂಗಿ. ಹಸಿ ಬೆಳ್ಳುಳ್ಳಿ ಜಗಿದು ಅದರ ರಸ ನುಂಗುವುದು ಸ್ವಲ್ಪ ಕಷ್ಟ ಅನಿಸಿದರೂ ಗಂಟಲು ಕೆರೆತ ಬೇಗನೆ ಕಡಿಮೆಯಾಗುವುದು. ಇನ್ನು 2-3 ಬೆಳ್ಳುಳ್ಳಿ ಎಸಳನ್ನು ಒಂದು ಕಪ್ ನೀರಿಗೆ ಹಾಕಿ ಕುದಿಸಿ, ಆ ನೀರು ಬಿಸಿ ಬಿಸಿ ಇರುವಾಗಲೇ ಅದರಿಂದ ಬಾಯಿ ಮುಕ್ಕಳಿಸಿ (ನೀರು ತುಂಬಾ ಬಿಸಿ ಹಾಕಬೇಡಿ). ದಿನದಲ್ಲಿ 3-4 ಬಾರಿ ಬಾಯಿ ಮುಕ್ಕಳಿಸಿ. ಹೀಗೆ ಮಾಡಿದರೆ ಗಂಟಲು ಕೆರೆತ ಬೇಗನೆ ಕಡಿಮೆಯಾಗುವುದು.

ನಿಂಬೆಹಣ್ಣು: ಇದರಲ್ಲಿರುವ ಆಸ್ಟ್ರಿಜೆಂಟ್ ಅಂಶ ಗಂಟಲು ಕೆರೆತ ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಇದು ಗಾಳಿಯಲ್ಲಿ ಬರುವ ಸೋಂಕಾಣು ಹಾಗೂ ಬ್ಯಾಕ್ಟಿರಿಯಾಗಳು ನಮ್ಮ ದೇಹದ ಮೇಲೆ ಪ್ರಭಾವ ಬೀರದಂತೆ ನಮ್ಮ ದೇಹವನ್ನು ರಕ್ಷಣೆ ಮಾಡುತ್ತದೆ. ಬಳಸುವುದು ಹೇಗೆ? * ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ನಿಂಬೆ ರಸ ಹಾಕಿ, ಅದಕ್ಕೆ ಅರ್ಧ ಚಮಚ ಜೇನು ಹಾಕಿ ಆ ನೀರಿನಲ್ಲಿ ಮುಕ್ಕಳಿಸಿ. ದಿನದಲ್ಲಿ 3-4 ಬಾರಿ ಈ ನೀರನ್ನು ಬಿಸಿ ಮಾಡಿ ಬಾಯಿ ಮುಕ್ಕಳಿಸಬೇಕು.

ಜೇನು: ಗಂಟಲು ಕೆರೆತ ಹೋಗಲಾಡಿಸಲು ಗಿಣ್ಣನ್ನು ಬಳಸುತ್ತೇವೆ. ಗಂಟಲು ಕೆರೆತಕ್ಕೆ ಜೇನು ಬಳಸುವುದು ಒಳ‍್ಳೆಯದೆಂದು ವೈದ್ಯರು ಕೂಡ ಹೇಳುತ್ತಾರೆ. ಬಳಸುವುದು ಹೇಗೆ? ಒಂದು ಲೋಟ ಬಿಸಿ ನೀರಿಗೆ 2 ಚಮಚ ಜೇನು ಹಾಕಿ ಕುಡಿದರೆ ಒಳ್ಳೆಯದು. ಮಲಗುವ ಮುಂಚೆ ಈ ರೀತಿ ಮಾಡಿದರೆ ಮಾರನೆಯದ ದಿನಕ್ಕೆ ಗಂಟಲು ನೋವು ಕಡಿಮೆಯಾಗಿರುತ್ತದೆ.

 

 

ಫ್ರೆಶ್ ನ್ಯೂಸ್

Latest Posts

Featured Videos