ಈ ಮನೆಮದ್ದು ಬಳಸಿ ಶೀತ ಕಡಿಮೆ ಮಾಡಿಕೊಳ್ಳಿ

ಈ ಮನೆಮದ್ದು ಬಳಸಿ ಶೀತ ಕಡಿಮೆ ಮಾಡಿಕೊಳ್ಳಿ

ಮಳೆಗಾಲದಲ್ಲಿ ಆಹ್ವಾನವಿಲ್ಲದೇ ಬರುವ ಅತಿಥಿ ಎಂದರೆ ಶೀತ, ಕೆಮ್ಮು, ಜ್ವರ…ಈ ಸಂದರ್ಭದಲ್ಲಿ ಶೀತ, ಕೆಮ್ಮು ಬಂದರೂ ಭಯ ಪಡುವಂತಾಗಿದೆ. ಇದಕ್ಕೆ ಕಾರಣ ಇಡೀ ಪ್ರಪಂಚವನ್ನೇ ಬಾಧಿಸುತ್ತಿರುವ ಕೊರೋನಾ.
ಶೀತ ಬಂದರಂತೂ ಯಾಕಾಗಿ ಬಂದಿತೋ ಎಂದು ಬೈದುಕೊಳ್ಳುವರೇ ಹೆಚ್ಚು..ಇದಕ್ಕೆ ಆಸ್ಪತ್ರೆಗೆ ಹೋಗುವುದಕ್ಕಿಂತ ಮನೆಮದ್ದುಗಳನ್ನು ಆಶ್ರಯಿಸಿದರೆ ಹೆಚ್ಚು ಪರಿಣಾಮಕಾರಿಯೂ ಹೌದು ಅಡ್ಡಪರಿಣಾಮದಿಂದಲೂ ದೂರ ಇರಬಹುದು.

ಶೀತ ತಡೆಗಟ್ಟಲು ಮನೆಮದ್ದುಗಳು
ಶೀತ ಕಡಿಮೆಯಾಗಲು ಕನಿಷ್ಠ ಒಂದು ವಾರವಾದರೂ ಬೇಕು. ಹಾಗಾಗಿ ಸ್ವಲ್ಪ ಮಟ್ಟಿನ ವಿಶ್ರಾಂತಿ ಬೇಕು. ಈ ಮನೆಮದ್ದುಗಳನ್ನು ಪಾಲಿಸಿ.. ಶೀತದಿಂದ ದೂರವಿರಿ..

ನೀರು ಅಭ್ಯಾಸ ಮಾಡಿಕೊಳ್ಳಿ
ಸರ್ವ ರೋಗಕ್ಕೂ ನೀರು ಪರಿಣಾಮಕಾರಿ. ಹಾಗಾಗಿ ತಂಪಾದ ಪಾನೀಯಗಳ ಹೊರತಾಗಿ ನೀರಿಗೆ ಜೇನು ಹಾಕಿ ಕುಡಿಯುವುದು, ಸೂಪ್, ತಾಜಾ ಜ್ಯೂಸ್ (ಐಸ್‍ಕ್ಯೂಬ್ ಬೇಡ) ಇವೆಲ್ಲವೂ ಶೀತ ಕಡಿಮೆ ಮಾಡಬಹುದು

ವಿಶ್ರಾಂತಿ
ದೇಹಕ್ಕೆ ವಿಶ್ರಾಂತಿ ಇದ್ದಷ್ಟು ಮನುಷ್ಯ ಚಟುವಟಿಕೆಯಿಂದ ಕೂಡಿರುತ್ತಾನೆ. ಶೀತ ಬಂದಮತಹ ಸಂದರ್ಭದಲ್ಲಿ ವಿಶ್ರಾಂತಿ ಪಡೆದುಕೊಳ್ಳುವುದನ್ನು ಮರೆಯಬೇಡಿ.

ಗಂಟಲು ಕೆರೆತ ಕಡಿಮೆ ಮಾಡಿಕೊಳ್ಳಿ
ಶೀತದ ವೇಳೆ ಗಂಟಲು ಕೆರೆತ ಸಾಮಾನ್ಯವಾಗಿರುತ್ತದೆ. ಆಗ ಸ್ವಲ್ಪ ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ ಆಗಾಗ ಬಾಯಿ ಮುಕ್ಕಳಿಸಿ. ಅತಿಶೀಘ್ರವಾಗಿ ಗುಣಮುಖವಾಗುವುದಕ್ಕೆ ಇದು ಸಾಕಷ್ಟು ಪರಿಣಾಮಕಾರಿ.

ಮೂಗು ಕಟ್ಟುವುದಕ್ಕೆ ಮದ್ದು
ಶೀತ ಸಂದರ್ಭದಲ್ಲಿ ಮೂಗು ಕಟ್ಟುವುದು ಸರ್ವೇ ಸಾಮಾನ್ಯ. ಆಗ ಬಿಸಿ ನೀರಿಗೆ ಪುದೀನ ಎಣ್ಣೆ, ನೀಲಗಿರಿ ಎಣ್ಣೆ ಹಾಗೂ ವಿಕ್ಷ್ ಬಳಸಿ ಹಬೆ ತೆಗೆದುಕೊಳ್ಳುವುದರಿಂದ ಮೂಗು ಕಟ್ಟುವುದು ತಡೆಗಟ್ಟುತ್ತದೆ.

ಬಿಸಿ ಬಿಸಿ ನೀರು ಕುಡಿಯಿರಿ
ಬಿಸಿ ಬಿಸಿ ನೀರು ಶೀತಕ್ಕೆ ರಾಮಬಾಣ. ಹಾಗಾಗಿ ದಿನಕ್ಕೆ ನಿಮಗೆ ಎಷ್ಟು ಬಾರಿ ಬಿಸಿ ನೀರು ಕುಡಿಯಲು ಸಾಧ್ಯವೋ ಅಷ್ಟು ಬಾರಿ ಬಿಸಿ ನೀರು ಕುಡಿಯಿರಿ.

ಇದಿಷ್ಟು ಶೀತದಿಂದ ಮುಕ್ತವಾಗಲು ಇರುವ ಮನೆ ಮದ್ದುಗಳು..ಇವನ್ನು ಪಾಲಿಸಿ..ಶೀತ ಕಡಿಮೆ ಮಾಡಿಕೊಳ್ಳಿ

ಫ್ರೆಶ್ ನ್ಯೂಸ್

Latest Posts

Featured Videos