ಅಂದವಾದ ಪಾದಗಳ ಪಡೆಯಲು ಮನೆ ಮದ್ದು

ಅಂದವಾದ ಪಾದಗಳ ಪಡೆಯಲು ಮನೆ ಮದ್ದು

ಬೆಂಗಳೂರು, ಜ. 23: ಚಳಿಗಾಲ ಬಂತೆಂದರೆ ಸಾಕು ನಮ್ಮ ಪಾದಗಳಲ್ಲಿ ಬಿರುಕು ಉಂಟಾಗುತ್ತದೆ ಮತ್ತ ಪಾದದ ಅಂದವನ್ನ ಕಳೆದು ಕೊಳ‍್ಳುತ್ತವೆ ಇಂತಹ ಬಿರುಕು ಸಮಸ್ಯೆಗೆ ಹಾಗೂ ಪಾದದ ಅಂದ ಹೆಚ್ಚಿಸಲು ನಮ್ಮ ಮನೆಯಲ್ಲಿ ಕೆಲವು ಔಷಧಿಗಳನ್ನು ಬಳಸಿ ನಿವಾರಣೆ ಮಾಡಿಕೊಳ‍್ಳಬಹುದು.

ಹೌದು, ಬಹಳಷ್ಟು ಮಂದಿಗೆ ತಮ್ಮ ಕಾಲಿನ ಬಗ್ಗೆ ಅಷ್ಟಾಗಿ ಕಾಳಜಿ ಇರುವುದಿಲ್ಲ. ಮುಖಕ್ಕೆ ತೆಗೆದುಕೊಳ್ಳುವಷ್ಟು ಕೇರ್ ಕಾಲುಗಳ ಬಗ್ಗೆ ತೆಗೆದುಕೊಳ್ಳುವುದಿಲ್ಲ. ಆದರೆ ಅವುಗಳ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಅಂದವಾದ ಪಾದ ನಿಮ್ಮದಾಗುತ್ತದೆ.

* 2 ಮೂರು ಚಮಚ ಮುಲ್ತಾನಿ ಮಿಟ್ಟಿಗೆ ಅಗತ್ಯದಷ್ಟು ಗುಲಾಬಿ ನೀರನ್ನು ಬೆರೆಸಿ ಕಲಸಿಕೊಂಡು ಪಾದಕ್ಕೆ ಬಳಿದುಕೊಳ್ಳಬೇಕು. ಒಣಗಿದ ನಂತರ ತೊಳೆದು ಮಾಯಿಶ್ಚರೈಸರ್ ಕ್ರೀಮ್ ಹಚ್ಚಿಕೊಳ್ಳುವುದರಿಂದ ಪಾದ ಆರೋಗ್ಯವಾಗಿರುವುದರ ಜೊತೆಗೆ ಅಂದವಾಗಿ ಕಾಣುತ್ತದೆ.

* ಉಪ್ಪು ಮತ್ತು ನಿಂಬೆರಸ ಸೇರಿಸಿ ಪಾದಕ್ಕೆ ಹಚ್ಚಿಕೊಳ್ಳಬೇಕು. ಒಣಗಿದ ಮೇಲೆ ಅದನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಇದರಿಂದ ಮೃತ ಕಣಗಳು ಹೋಗಿ ಪಾದ ಫ್ರೆಶ್ ಆಗಿ ಕಾಣುತ್ತದೆ.

* ಹಿಮ್ಮಡಿ ಒಡೆದಿದ್ದರೆ ಅದಕ್ಕೆ ಕೊಬ್ಬರಿ ಎಣ್ಣೆ ಹಚ್ಚಿ ಮರ್ದನ ಮಾಡಿಕೊಂಡು ಕಾಲಿಗೆ ಸಾಕ್ಸ್ ಹಾಕಿಕೊಂಡು ಮಲಗಿದರೆ ಪಾದ ಮೃದುವಾಗುತ್ತದೆ.

* ಕಾಲಿನ ಉಗುರುಗಳಿಗೆ ಸದಾ ನೇಲ್ ಪಾಲಿಶ್ ಹಚ್ಚುವುದು ಒಳ್ಳೆಯದಲ್ಲ. ಅದು ಉಗುರಿನ ಆರೋಗ್ಯಕ್ಕೆ ತಡೆಯಾಗುತ್ತದೆ. ಹೀಗಾಗಿ ಉಗುರುಗಳು ವಾತಾವರಣದ ಗಾಳಿಯಲ್ಲಿ ಇದ್ದರೇನೇ ಆರೋಗ್ಯವಾಗಿರುತ್ತದೆ.

* ಪಾದಗಳಲ್ಲಿರುವ ಮೃತ ಕಣಗಳು ಹೋಗಬೇಕೆಂದರೆ ವಾರದಲ್ಲಿ ಒಂದು ಬಾರಿ ಸಾಬೂನು ಹಾಕಿ ಉಪ್ಪು ಹಾಕಿದ ನೀರಿನಲ್ಲಿ ಕಾಲುಗಳನ್ನು ಚೆನ್ನಾಗಿ ತೊಳೆಯಬೇಕು.

 

ಫ್ರೆಶ್ ನ್ಯೂಸ್

Latest Posts

Featured Videos