ದಾಖಲೆ ಮುರಿಯುವ ‘ಹಿಟ್ ಮ್ಯಾನ್’

ದಾಖಲೆ ಮುರಿಯುವ ‘ಹಿಟ್ ಮ್ಯಾನ್’

ಅಡಿಲೇಡ್ , ಡಿ. 2 : ಕ್ರಿಕೆಟ್ ನ ಅಪರೂಪದ ದಾಖಲೆ ಮುರಿಯಲು ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾರಿಂದ ಮಾತ್ರ ಸಾಧ್ಯ ಎಂದು ಆಸಿಸ್ ಕ್ರಿಕೆಟ್ ದೈತ್ಯ ಡೇವಿಡ್ ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.
ಅಡಿಲೇಡ್ ನಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಡೇವಿಡ್ ವಾರ್ನರ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನೆಡೆಸಿದ್ದರು. ಈ ಹೊತ್ತಿಗೆ ಆಸಿಸ್ ತಂಡ 3 ವಿಕೆಟ್ ನಷ್ಟಕ್ಕೆ 589ರನ್ ಗಳಿಸಿತ್ತು. ಈ ವೇಳೆ ಡೇವಿಡ್ ವಾರ್ನರ್ 335 ರನ್ಗಳಿಸಿ 400 ರನ್ ಗಳತ್ತ ದಾಪುಗಾಲಿರಿಸಿದ್ದರು. ಆದರೆ ಈ ವೇಳೆಗೆ ಆಸ್ಟ್ರೇಲಿಯಾದ ನಾಯಕ ಟಿಮ್ ಪೈನೆ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದ್ದರು. ಇದರಿಂದ 65 ರನ್ಗಳಿಂದ ಲಾರಾ ದಾಖಲೆ ಮುರಿಯುವ ಅವಕಾಶವನ್ನು ವಾರ್ನರ್ ಕಳೆದುಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos