ಮಸೀದಿಯಲ್ಲಿ ಸಪ್ತಪದಿ ತುಳಿದ ಹಿಂದೂ ನವ ಜೋಡಿ

ಮಸೀದಿಯಲ್ಲಿ ಸಪ್ತಪದಿ ತುಳಿದ ಹಿಂದೂ ನವ ಜೋಡಿ

ತಿರುವನಂತಪುರಂ, ಜ. 20: ಸಾಮಾನ್ಯವಾಗಿ ನಮ್ಮ ಜಗತ್ತಿನಲ್ಲಿ ನಾವೆಲ್ಲರೂ  ಜಾತಿ ಗೋಸ್ಕರ ಕಿತ್ತಾಡೋದು ನಾವೆಲ್ಲರೂ ನೋಡಿದ್ದೇವೆ. ಆದರೆ ತಿರುವನಂತಪುರದಲ್ಲಿ ಜಾತಿ ಭೇದಭಾವ ಮಾಡದೆ ಹಿಂದೂ ವಧು-ವರರಿಬ್ಬರೂ ಮದುವೆಯಾಗಿರು ಸಂಗತಿ ನಡೆದಿದೆ.

ಹೌದು, ದೇಶದ ಸಾಮರಸ್ಯ ಹಾಗೂ ಸೌಹಾರ್ದತೆಯ ಸಂಕೇತದ ಪ್ರತಿರೂಪವಾಗಿ ಕೇರಳದ ಹಿಂದೂ ಪ್ರೇಮಿಗಳಿಬ್ಬರು ಮಸೀದಿಯಲ್ಲಿ ವಿವಾಹವಾಗಿದ್ದಾರೆ.

ಕಾಯಂಕುಲಂನಲ್ಲಿರುವ ಚೆರುವಾಲಿ ಮುಸ್ಲಿಂ ಜಮಾಅತ್ ಮಸೀದಿಯಲ್ಲಿ ಹಿಂದೂ ಸಂಪ್ರದಾಯದಂತೆ ನವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಈ ಸುಂದರ ಸಮಾರಂಭಕ್ಕೆ ಹಿಂದೂ ಹಾಗೂ ಮುಸ್ಲಿಂ ಧರ್ಮದ ಜನರು ಬಂದು, ಮದುಮಕ್ಕಳಿಗೆ ಶುಭ ಹಾರೈಸಿದರು.

ಶೃಂಗಾರಗೊಂಡಿದ್ದ ಮಂಟಪದಲ್ಲಿ ವಧು ಅಂಜು ಹಾಗೂ ವರ ಶರತ್ ತಮ್ಮ ಸಂಪ್ರದಾಯಂತೆ ಸಪ್ತಪದಿ ತುಳಿದರು. ವಿಶೇಷ ಎಂದರೆ ಈ ವಿಚಾರ ತಿಳಿದ ಸಿಎಂ ಪಿಣರಾಯಿ ವಿಜಯ್ ತುಂಬಾ ಖುಷಿಯಾಗಿದ್ದಾರೆ. ಅಲ್ಲದೇ ತಮ್ಮ ಫೇಸ್ಬುಕ್ನಲ್ಲಿ ದಂಪತಿಗೆ ಶುಭ ಹಾರೈಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos