ಮುಂಬೈ: ಭಾರೀ ಮಳೆ, ರಸ್ತೆಗಳು ಜಲಾವೃತ

ಮುಂಬೈ: ಭಾರೀ ಮಳೆ, ರಸ್ತೆಗಳು ಜಲಾವೃತ

ಮುಂಬೈ: ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಶುಕ್ರವಾರ ಬೆಳಿಗ್ಗೆ ೧೦ ಗಂಟೆಯವರೆಗೆ ೧೦ ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ೨೪ ಗಂಟೆಗಳಲ್ಲಿ ಕೊಲಾಬಾದಲ್ಲಿ ೧೨೪ ಮಿ.ಮೀ, ಕುಫೆ ಪರಾಧೆಯಲ್ಲಿ ೧೦೫ ಮಿ.ಮೀ, ವಾರ್ಲಿಯಲ್ಲಿ ೮೫ ಮಿ.ಮೀ ಮಲಬಾರ್‌ನಲ್ಲಿ ೮೧ ಮಿ.ಮೀ ಮಳೆ ಸುರಿದಿದೆ. ಇನ್ನು ಕೆಲವು ಉಪನಗರಗಳಲ್ಲಿ ೪೦ ಮಿ.ಮೀ ಮಳೆ ದಾಖಲಾಗಿದೆ.

ಮುಂಬೈನಲ್ಲಿ ಶುಕ್ರವಾರ ಮತ್ತು ಶನಿವಾರ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos