ಎಪಿಎಂಸಿ ಕಾಯ್ದೆಗೆ ಹೋರಾಟಕ್ಕೆ ಹೆಚ್ಡಿಕೆ ಎಚ್ಚರಿಕೆ

ಎಪಿಎಂಸಿ ಕಾಯ್ದೆಗೆ ಹೋರಾಟಕ್ಕೆ  ಹೆಚ್ಡಿಕೆ ಎಚ್ಚರಿಕೆ

ಬೆಂಗಳೂರು, ಮೇ 14 :  ರೈತ ತನ್ನ ಉತ್ಪನ್ನಗಳನ್ನು ಮಾರಾಟ ಮಾಡು ಸಂದರ್ಭದಲ್ಲಿ ಒಂದು ವೇಳೆ ವಂಚನೆಗೊಳದಾದರೆ ಎಪಿಎಂಸಿ ಮೂಲಕ ವ್ಯಾಜ್ಯ ಬಗೆ ಹರಿಸಿಕೊಳ್ಳಲು ಅವಕಾಶವಿದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳು ಮಾಡುವ ವಂಚನೆಗಳ ವಿರುದ್ಧ ನಮ್ಮ ರೈತರು ಹೋರಾಡಬಲ್ಲರೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವ ಕುರಿತು ಇಂದು ಸಚಿವ ಸಂಪುಟದಲ್ಲಿ ನಿರ್ಧಾರವಾಗುತ್ತಿದೆ. ಅಭದ್ರತೆಯ ಈ ವ್ಯವಸ್ಥೆಗೆ ಕೃಷಿ, ರೈತರನ್ನು ಒಳಪಡಿಸುವುದು ನಮ್ಮ ಬೆನ್ನೆಲುಬನ್ನೇ ಮುರಿದಂತೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

20 ಲಕ್ಷ ಕೋಟಿ ರೂ. ಪ್ಯಾಕೇಜ್ ವೇಳೆ ಸ್ಥಳೀಯತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದರು. ಆದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ರೈತರನ್ನು ಒಪ್ಪಿಸುವುದು ಯಾವ ಸ್ಥಳೀಯತೆಯಾಗಲಿದೆ. ಬಹುರಾಷ್ಟ್ರೀಯ ಕಂಪೆನಿಯವರ ಕೂಟ ವ್ಯವಸ್ಥೆಯ ಎದುರು ಸೆಣಸಬಲ್ಲರೇ? ಕೃಷಿ ವ್ಯವಸ್ಥೆಗೆ ಕಾಯಕಲ್ಪ ತರಬೇಕು. ಆದರೆ ದಾಸ್ಯಕ್ಕೊಳ ಪಡಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos