ಹ್ಯಾಟ್ರಿಕ್ ಹೀರೋ ಶಿವಣ್ಣ ತಿರುಪತಿಗೆ

ಹ್ಯಾಟ್ರಿಕ್ ಹೀರೋ ಶಿವಣ್ಣ ತಿರುಪತಿಗೆ

ಹೈದಾರಾಬಾದ್, ಡಿ. 12 : ಸ್ಯಾಂಡಲ್ವುಡ್ನ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರು ಇಂದು ಆಂಧ್ರ ಪ್ರದೇಶದಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಶಿವರಾಜ್ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಕೆಲಸಗಳಿಂದ ಬಿಡುವು ಪಡೆದುಕೊಂಡು ತಮ್ಮ ಪತ್ನಿ ಗೀತಾ ಅವರ ಜೊತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಗೀತಾ ಅವರು ದೇವರಿಗೆ ಮುಡಿ ನೀಡಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಿವಣ್ಣ, ನಾವು ಯಾವಾಗಲೂ ತಿರುಪತಿಗೆ ಬರುತ್ತಿರುತ್ತೇವೆ. ಈ ದೇವಸ್ಥಾನಕ್ಕೆ ಬಂದು ಏಳು ವರ್ಷವಾಗಿತ್ತು. ದೇವರ ದರ್ಶನ ಚೆನ್ನಾಗಿ ನಡೆಯಿತು. ನನ್ನ ಪತ್ನಿ ದೇವರಿಗೆ ಎರಡನೇ ಬಾರಿ ಮುಡಿ ನೀಡಿದ್ದಾರೆ. ಇಲ್ಲಿಗೆ ಬಂದಿದ್ದು ಖುಷಿ ಆಗಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos