ಡಿ.26ರಂದು ಹಾಸನ ಸೀಮೆ ಉತ್ಸವ -2019

ಡಿ.26ರಂದು ಹಾಸನ ಸೀಮೆ ಉತ್ಸವ -2019

ಹಾಸನ, ಡಿ. 24: ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ, ಹಾಸನ , ಹೊಯ್ಸಳ ಜಾನಪದ ಕಲಾ ಸಂಸ್ಥೆ (ರಿ), ಅಕ್ಷರ ಬುಕ್ ಹೌಸ್ ಇವರುಗಳ ಸಂಯುಕ್ತಾಶ್ರಯದಲ್ಲಿ ಡಿ.26 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ 2019ರ ಹಾಸನ ಸೀಮೆ ಉತ್ಸವ ನಡೆಯಲಿದೆ.

ಉತ್ಸವದ ರಾಯಭಾರಿಗಳಾಗಿ ರುದ್ರಪಟ್ಟಣದ ಸಂಗೀತ ವಿದ್ವಾಂಸರು ಸಾಹಿತಿ ಹಾಗೂ ಸಾಂಸ್ಕೃತಿಕ ಸಂಘಟಕರಾದ ಡಾ. ಆರ್.ಕೆ. ಪದ್ಮನಾಭ ಅವರು ಭಾಗವಹಿಸುತ್ತಿದ್ದು, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ರಾಗಿ ರಾಶಿಯ ಪೂಜೆ ಮಾಡಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ನಿವಾಸ್ ಸೆಪಟ್, ಉಪವಿಭಾಗಾಧಿಕಾರಿ ಡಾ. ನವೀನ್ ಭಟ್, ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ಶಿವಲಿಂಗಪ್ಪ ಎಸ್ ಕುಂಬಾರ್ ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಕಾರ್ಯಕ್ರಮವೂ ಜಿಲ್ಲೆಯ ಸಂಸ್ಕೃತಿಗಳನ್ನು ಒಳಗೊಂಡಿರು ನಾನಾ ಸಾಂಸ್ಕೃತಿಕವಾದ (ನಿರಕಾರಣ ನಾಟಕ ) ರೋಹಿಣಿ ಹಾಸನ, ನಿರ್ದೇಶನ, ರಂಗವೃಕ್ಷ ಮೈಸೂರು.), ಸ್ಯಾಕ್ಸೋಪೋನ್  ಶ್ರೀ ನರಸಿಂಹಸ್ವಾಮಿ ( ಶ್ರೀ ಲಕ್ಷ್ಮೀ ಮಂಗಳವಾದ್ಯ ವೃಂದ, ಬೇಲೂರು) ತೊಗಲು ಗೊಂಬೆಯಾಟ ( ಶ್ರೀ ಲೋಕೇಶ್, ಶ್ರೀ ಪುರದಮ್ಮ ಕಲಾ ಸಂಘ (ರಿ), ಬೀಕನಹಳ್ಳಿ.), ಮಕ್ಕಳ ನಾಟಕ (ಕಲಾಸಿರಿ ನಾಟಕ ಶಾಲೆ, ಹಾಸನ), ಸೋಬಾನೆ  ಕು. ಸ್ಪೂರ್ತಿ ಜೈನ್, ಹಾಸನ, ಕೋಲಾಟ  ಶ್ರೀ ಬಿ.ಟಿ.ಮಾನವ (ಹೊಯ್ಸಳ ಜಾನಪದ ಕಲಾ ಸಂಸ್ಥೆ (ರಿ.), ಹಾಸನ), ಸಪ್ತಮಾತೃಕೆ ರೂಪಕ ವಿದೂಷಿ ಡಾ. ಸ್ವಾತಿ ಪಿ. ಭಾರದ್ವಾಜ್  ( ನಾಟ್ಯ ಭೈರವಿ ನೃತ್ಯ ಶಾಲೆ, ಚನ್ನರಾಯಪಟ್ಟಣ), ಕಂಸಾಳೆ  ಶ್ರೀ ಲಕ್ಷ್ಮಣ್ (ತಂಡ ತಟ್ಟೆಕರೆ), ಹೋರಾಟದ ಹಾಡು  ಶ್ರೀ ಗ್ಯಾರಂಟಿ ರಾಮಣ್ಣ  (ಪ್ರಗತಿ ಸಂಸ್ಥೆ (ರಿ), ಕಂಚಮಾರನಹಳ್ಳಿ, ಹಾಸನ) , ಭರತನಾಟ್ಯ  ವಿದೂಷಿ ಶುಭ್ರತಾ ಪ್ರಭಾಕರ್ (ಕಲಾ ಸೌರಭ ನೃತ್ಯ ಶಾಲೆ, ಚನ್ನರಾಯಪಟ್ಟಣ), ರಂಗಗೀತೆ ಶ್ರೀ ಜಯಶಂಕರ್ ಬೆಳಗುಂಬ (ಕಲಾಸಿರಿ ನಾಟಕ ಶಾಲೆ ಹಾಸನ), ಹಲವು ನೃತ್ಯ ಪ್ರಕಾರಗಳು :ಕು|| ಶಿಲ್ಪ ಬೇಲೂರು (ಶಾಂತಲಾ ಕಲಾ ಕುಟೀರ ಬೇಲೂರು,) ತಂಬೂರಿ ಪದ : ಶ್ರೀಮತಿ ವಾಣಿ ನಾಗೇಂದ್ರ (ಸ್ವರ ಸಂಗಮ ಸಂಗೀತ ಶಾಲೆ, ಹಾಸನ), ವೀರಗಾಸೆ : ಶ್ರೀ ದೀಲಿಪ್ ಮತ್ತು ಪಿ.ಪಿ.ಇ.ಸಿ. ಶಾಲೆ ತಂಡ, ಬೇಲೂರು. ಸುಗ್ಗಿ ಕುಣಿತ ( ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್, ಹಾಸನ) ಕೋಲಾಟ (ವಾಸವಿ ವನಿತ ಸಮಾಜ ಹಾಸನ), ಹರಿಕಥೆ ಹಾಡು  ಶ್ರೀಮತಿ ಎಂ. ಪಾರ್ವತಿ, (ಹೊಳೆನರಸೀಪುರ).

ಪ್ರಶಸ್ತಿ ಪ್ರದಾನ

ಈ ಕಾರ್ಯಕ್ರಮದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರುಗಳಾದ ಶ್ರೀ ಗುರು ರಾಜ್ ಹೆಬ್ಬಾರ್ “ಬುಕ್ಕ ನಾಯಕ ಪ್ರಶಸ್ತಿ ” ( ಸಮಾಜ ಸೇವೆ ) , ಮನುಬಸವರಾಜ್ ” ಕೆ ಎಸ್ ಅಶ್ವಥ್ ಪ್ರಶಸ್ತಿ ” ( ಸಿನಿಮಾ ಕ್ಷೇತ್ರ ) , ಡಾ ಕುಮಾರಚಲ್ಯ ” ಜನ್ನ ಪ್ರಶಸ್ತಿ ” ( ಸಾಹಿತ್ಯ ಕ್ಷೇತ್ರ ) , ವಿ.ಆರ್ ಮಂಜಪ್ಪ ” ಶಾಂತಲಾದೇವಿ ಪ್ರಶಸ್ತಿ ” ( ಕಲಾ ಕ್ಷೇತ್ರ ) , ಹೆಚ್ ಎಸ್ ಗೋವಿಂದೇಗೌಡ ” ಕೆ ಸಣ್ಣೆಗೌಡ ಪ್ರಶಸ್ತಿ ( ನಾಟಕ ಕ್ಷೇತ್ರ ) , ಮೇಟಿಗೆರೆ ಹಿರಿಯಣ್ಣ ” ಮತ್ತಿಘಟ್ಟ ಕೃಷ್ಣಮೂರ್ತಿ ಪ್ರಶಸ್ತಿ ” ( ಜಾನಪದ ಕ್ಷೇತ್ರ) , ಬಿ.ಎನ್ ಸಂಜೀವ ” ಅರಳು ಪ್ರಶಸ್ತಿ ” ( ಹಾಸನ ಸೀಮೆ ಕ್ಷೇತ್ರ) ವಿವಿಧ ಬಗೆಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.

ಫ್ರೆಶ್ ನ್ಯೂಸ್

Latest Posts

Featured Videos