ಕೈ ಬೀಸಿ ಕರೆಯುತ್ತಿದೆ ಶಂಕರ ಫಾಲ್ಸ್

 ಕೈ ಬೀಸಿ ಕರೆಯುತ್ತಿದೆ ಶಂಕರ ಫಾಲ್ಸ್

ಚಿಕ್ಕಮಗಳೂರು, ಜ. 14 : ಮಲೆನಾಡಿನ ಸುತ್ತಮುತ್ತಲಿರೋ ಝರಿ, ಜಲಪಾತಗಳಂತೂ ನೋಡುಗನ ಮನಸ್ಸಿನ ಭಾವನೆಗಳಿಗೆ ಜೀವ ತುಂಬುತ್ತವೆ. ಸದ್ಯ ಕಾಫಿನಾಡಲ್ಲಿ ಚುಮು ಚುಮು ಚಳಿ ಜೋರಾಗಿದ್ದು, ಮೈ ಕೈ ನಡುಗಿಸೋ ಚಳಿ ಮಧ್ಯೆಯೂ ಜಲಪಾತದಲ್ಲಿ ಮಿಂದೇಳೋ ಖುಷಿ ಸಖತ್ ಥ್ರಿಲ್ ಕೊಡುತ್ತೆ.

ದಟ್ಟಕಾನನದ ಮಧ್ಯೆಯಿರೋ ಈ ಜಲಪಾತದ ಹೆಸರು ಶಂಕರ ಫಾಲ್ಸ್. ಇಲ್ಲಿ ಒಂದು ಕಲ್ಲು ಶಂಕರನ ರೂಪದಲ್ಲಿದ್ದು, ಅದರ ಮೇಲಿಂದ ಗಂಗೆ ಉಕ್ಕಿ ಹರಿದ ಹಾಗೆ ನೋಡುಗರಿಗೆ ಭಾಸವಾಗುತ್ತದೆ. ಹಾಗಾಗಿಯೇ ಈ ಜಲಪಾತಕ್ಕೆ ಹಿಂದಿನಿಂದಲೂ ಶಂಕರ ಜಲಪಾತವೆಂದು ನಾಮಕರಣ ಮಾಡಲಾಗಿದೆ. ಸುಮಾರು 20 ಅಡಿ ಎತ್ತರದಿಂದ ಬೀಳೋ ಈ ಗಂಗೆಗೆ ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳೊ ತಾಕತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಬಳಿಯಿರುವ ಈ ಫಾಲ್ಸ್, ಬೇಸಿಗೆಯಲ್ಲೂ ತನ್ನ ಸೌಂದರ್ವನ್ನ ಕಡಿಮೆ ಮಾಡಿಕೊಂಡಿಲ್ಲ. ಒಮ್ಮೆ ಈ ಸ್ಥಳಕ್ಕೆ ತೆರಳಿದ್ರೆ ಸಾಕು ಆಯಾಸವೆಲ್ಲಾ ಮಾಯವಾಗಿ ಉಲ್ಲಾಸ ಮೂಡುತ್ತೆ. ಯಾಂತ್ರಿಕ ಜೀವನದ ಜಂಜಾಟದಿಂದ ಹೊರತಂದು ನವಚೈತನ್ಯ ಒದಗಿಸೋ ಶಕ್ತಿ ಈ ಜಲಪಾತಕ್ಕಿದೆ. ಕಪ್ಪು ಬಂಡೆಗಳ ನಡುವೆ  ಹಾಲು ನೊರೆಯಂತೆ ಧುಮ್ಮುಕ್ಕುವ ಮನಮೋಹಕ ಜಲಪಾತದ ದೃಶ್ಯ ಕಾವ್ಯವನ್ನು ವರ್ಣಿಸಲು ಅಸಾಧ್ಯ.

ಫ್ರೆಶ್ ನ್ಯೂಸ್

Latest Posts

Featured Videos