ಹೋಟೆಲೋದ್ಯಮ ಉತ್ಪಾದನೆ, ವಹಿವಾಟು ಕುಂಠಿತ

ಹೋಟೆಲೋದ್ಯಮ ಉತ್ಪಾದನೆ, ವಹಿವಾಟು ಕುಂಠಿತ

ಹುಬ್ಬಳ್ಳಿ: ಕೋವಿಡ್ ಹಾವಳಿ, ಲಾಕ್ ಡೌನ್ ವೇಳೆ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಆಹಾರ ಉದ್ಯಮ ಒಂದಿಷ್ಟು ಪರವಾಗಿಲ್ಲ ಎಂಬಂತ್ತಾದರೂ, ಸಮಸ್ಯೆಗಳಿಂದ ಹೊರತಾಗಿಲ್ಲ. ಆದರೆ, ಇದೇ ವೇಳೆ ಹೋಟೆಲ್ ಉದ್ಯಮ ಮಾತ್ರ ಕಂಡರಿಯದ ರೀತಿಯಲ್ಲಿ ನಷ್ಟಕ್ಕೆ ಸಿಲುಕಿದ್ದು, ಇಂದಿಗೂ ಮೇಲೇಳಲು ಹೆಣಗಾಡುತ್ತಿದೆ.
ಲಾಕ್ ಡೌನ್ ಮುಗಿದು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೂ ಶೇ.೫೦ ಆಹಾರ ಧಾನ್ಯಗಳ ವ್ಯಾಪಾರ ಕಡಿಮೆಯಾಗಿದೆ ಎಂಬುದು ವ್ಯಾಪಾರಸ್ಥರ ಅನಿಸಿಕೆಯಾದರೆ, ಉತ್ಪಾದನೆಯಲ್ಲಿ ಶೇ.೨೫-೩೦ ಕಡಿಮೆ ಆಗಿದೆ ಎಂಬುದು ಉದ್ಯಮಿಗಳ ಅನಿಸಿಕೆ. ಆದರೆ, ಹೋಟೆಲ್ ಉದ್ಯಮ ಮಾತ್ರ ಶೇ.೯೦-೯೫ ನಷ್ಟ ಅನುಭವಿಸಿದೆ ಎಂಬುದು ಹೋಟೆಲ್ ಉದ್ಯಮದವರ ಅನಿಸಿಕೆ.
ಆಹಾರ ಉದ್ಯಮ
ಅವಳಿನಗರದಲ್ಲಿ ವಿವಿಧ ಆಹಾರ ಉತ್ಪನ್ನಗಳ ತಯಾರಿಕೆ ಹಾಗೂ ಮೌಲ್ಯ ವರ್ಧನೆ ಉದ್ಯಮಗಳು ಇವೆ. ಲಾಕ್ ಡೌನ್ ಸಂದರ್ಭದಲ್ಲಿ ಕೆಲದಿನ ಉದ್ಯಮ ಬಂದ್ ಆಗಿತ್ತಾದರೂ, ಆಹಾರಧಾನ್ಯ -ಪದಾರ್ಥಗಳ ಪೂರೈಕೆಯಲ್ಲಿ ಕೊರತೆ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಉದ್ಯಮ ಆರಂಭಕ್ಕೆ ಪ್ರೋತ್ಸಾಹ ನೀಡಿತ್ತು.
ಲಾಕ್ ಡೌನ್‌ನಲ್ಲಿ ಅವಲಕ್ಕಿ, ಬೆಲ್ಲ, ಕೇಸರಿ ರವಾ, ತೊಗರಿ, ಕಡಲೆ, ಹೆಸರು, ಉದ್ದು, ವಠಾಣಿ ಇನ್ನಿತರ ಪದಾರ್ಥಗಳು ಹೊರಗಿನಿಂದ ಬರುವುದು ನಿಂತು ಸ್ಥಳೀಯ ಉತ್ಪಾದನೆಗೆ ಹೆಚ್ಚು ಒತ್ತು ಸಿಕ್ಕಿತ್ತು.

ಫ್ರೆಶ್ ನ್ಯೂಸ್

Latest Posts

Featured Videos