ವಿಶ್ವದ ಅರ್ಧದಷ್ಟು ಸಂಪತ್ತು ಕೇವಲ 10 ವ್ಯಕ್ತಿಗಳ ಬಳಿ!

ವಿಶ್ವದ ಅರ್ಧದಷ್ಟು ಸಂಪತ್ತು ಕೇವಲ 10 ವ್ಯಕ್ತಿಗಳ ಬಳಿ!

ವಿಶ್ವದ ಅರ್ಧದಷ್ಟು ಸಂಪತ್ತು ಕೇವಲ 10 ವ್ಯಕ್ತಿಗಳ ಬಳಿಯಲ್ಲಿ ಇದೆ ಎಂದರೆ ಯಾರಿಗಾದರೂ ಆಶ್ಚರ್ಯ ಆಗದೇ ಇರದು!

ಜಗತ್ತಿನ ಹೆಚ್ಚಿನ ಸಂಪತ್ತು ಕೆಲವರ ಬಳಿಯಲ್ಲಿ ಇರುವುದರಿಂದ ಆದಾಯ ಅಸಮಾನತೆ ಮಹಾ ಪಿಡುಗಾಗಿ ಜಗತ್ತನ್ನು ಕಾಡುತ್ತಿದೆ. ವಿಶ್ವದ ಅರ್ಧದಷ್ಟು ಸಂಪತ್ತು ಕೇವಲ 10 ವ್ಯಕ್ತಿಗಳ ಬಳಿಯಲ್ಲಿ ಇದೆ ಎಂದರೆ ಯಾರಿಗಾದರೂ ಆಶ್ಚರ್ಯ ಆಗದೇ ಇರದು! ಜಗತ್ತಿನ ಹೆಚ್ಚಿನ ಸಂಪತ್ತು ಕೆಲವರ ಬಳಿಯಲ್ಲಿರುವುದರಿಂದಲೇ ಆದಾಯ ಅಸಮಾನತೆ ಮಹಾ ಪಿಡುಗಾಗಿ ಜಗತ್ತನ್ನು ಕಾಡುತ್ತಿದೆ.

ವಿಶ್ವದ ಅರ್ಧದಷ್ಟು ಸಂಪತ್ತುಹೊಂದಿರುವ ಅವರೇಲ್ಲರೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಮಹಾಪುರುಷರು. ಇವರಲ್ಲಿ ಹೆಚ್ಚಿನವರು ಅಮೆರಿಕಾದವರು, ಒಬ್ಬರು ಯೂರೋಪಿಯನ್, ಇನ್ನೊಬ್ಬರು ಮೆಕ್ಸಿಕನ್ ಹಾಗು ಭಾರತದವರನ್ನು ಸೇರಿಸುವುದಾದರೆ ಮುಕೇಶ್ ಅಂಬಾನಿ. ಇವರುಗಳು ಸಂಪತ್ತು ಹೊಂದಿರುವುದರ ಜೊತೆಗೆ ದಾನಧರ್ಮ ಮಾಡುವುದರಲ್ಲು ಮುಂದಿದ್ದಾರೆ.

ಜಗತ್ತಿನ ಅರ್ಧದಷ್ಟು ಸಂಪತ್ತು ಹೊಂದಿರುವ ಆ ಮಹಾಪುರುಷರು ಯಾರು ಎಂಬ ಕುತೂಹಲ ನಿಮ್ಮಲ್ಲಿ ಖಂಡಿತವಾಗಿಯೂ ಇರುತ್ತದೆ. ಆ ಶತಕೋಟ್ಯಾಧಿಪತಿಗಳ ಬಗ್ಗೆ
ಓದಿ..

ಜೆಫ್ ಬೆಜೊಸ್

ಸಂಸ್ಥೆ: ಅಮೆಜಾನ್.ಕಾಮ್ 
ಒಟ್ಟು ಆಸ್ತಿ ಮೌಲ್ಯ: 14,000 crores USD (USD 140 ಬಿಲಿಯನ್) 
ಜೆಫ್ ಬೆಜೊಸ್ ಅಮೆಜಾನ್.ಕಾಮ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ. ಅಮೆಜಾನ್ ನಲ್ಲಿ ಎಲ್ಲರೂ ಕೂಡ ಶಾಪಿಂಗ್ ಮಾಡಿರುತ್ತಾರೆ. ಇದು ವಿಶ್ವದ ದೊಡ್ಡ ಆನ್ಲೈನ್ ಶಾಪಿಂಗ್ ಮಳಿಗೆ. ಜೆಫ್ ಬಿಜೋಸ್ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅಮೆಜಾನ್.ಕಾಮ್ ಜಗತ್ತಿನ ಪ್ರತಿಷ್ಠಿತ ಇ-ಕಾಮರ್ಸ್, ಆನ್ಲೈನ್ ಮಾರುಕಟ್ಟೆಯ ಬೃಹತ್ ಕಂಪನಿಯಾಗಿದೆ.

ಬಿಲ್ ಗೇಟ್ಸ್

ಸಂಸ್ಥೆ: ಮೈಕ್ರೊಸಾಪ್ಟ್
ಒಟ್ಟು ಆಸ್ತಿ ಮೌಲ್ಯ: USD 92 ಬಿಲಿಯನ್ 
ಬಿಲಿಯನೇರ್ ಪದದ ಇನ್ನೊಂದು ನಾಣ್ಣುಡಿ ರೂಪಕ ಬಿಲ್ ಗೇಟ್ಸ್. ಇವರು ಅಮೆರಿಕಾದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಮೈಕ್ರೊಸಾಪ್ಟ್ ಸಂಸ್ಥಾಪಕರು. ಮೈಕ್ರೊಸಾಪ್ಟ್ ಕಂಪನಿಯು ಲೈಸೆನ್ಸ್, ಕಂಪ್ಯೂಟರ್ ಸಾಪ್ಟ್ವೇರ್, ಎಲೆಕ್ಟ್ರಾನಿಕ್ಸ್, ಪರ್ಸನಲ್ ಕಂಪ್ಯೂಟರ್ಸ್ ಮತ್ತು ಸೇವೆಗಳನ್ನು ಒದಗಿಸುತ್ತದೆ. ಮೈಕ್ರೊಸಾಪ್ಟ್ ಕಂಪ್ಯೂಟರ್ ಕ್ಷೇತ್ರದಲ್ಲಿ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ. ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ ಮೈಕ್ರೊಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಸತತವಾಗಿ ಅಗ್ರಸ್ಥಾನ ಪಡೆದವರು. ಈಗ ಜೆಫ್ ಬೆಜೊಸ್ ನೊಂದಿಗೆ ಪೈಪೋಟಿಯಲ್ಲಿದ್ದಾರೆ.

ವಾರೆನ್ ಬಫೆಟ್

ಸಂಸ್ಥೆ: ಬರ್ಕ್‌ಷೈರ್ ಹಾಥ್‌ವೇ 
ಒಟ್ಟು ಆಸ್ತಿ ಮೌಲ್ಯ: USD 85 ಬಿಲಿಯನ್ 
ವಾರೆನ್ ಬಫೆಟ್ ವಿಶ್ವದ ಶ್ರೇಷ್ಠ ಹೂಡಿಕೆದಾರ ಹಾಗೂ ಮಹಾನ್ ದಾನಿ. ಸಣ್ಣ ವಯಸ್ಸಿನಲ್ಲೇ ಕೋಕಾ ಕೋಲಾ ಕ್ಯಾನುಗಳನ್ನು ಲಾಭಕ್ಕೆ ಮಾರಿ, ಪೇಪರ್ ಹಾಕಿ ದುಡ್ಡು ಮಾದವರು. ವಿಶ್ವದ ಹಣಕಾಸು ಎಂಬ ಮಾಯಾಲೋಕದಲ್ಲಿ ನಿರಂತರವಾಗಿ ಆರು ದಶಕಗಳಿಗೂ ಹೆಚ್ಚು ಕಾಲ ಶ್ರೇಷ್ಠ ಹೂಡಿಕೆದಾರನಾಗಿ ಉಳಿದ ವಿಸ್ಮಯಕಾರಿ ಉದ್ಯಮಿ. ಸಾವಿರಾರು ಹೂಡಿಕೆದಾರರು ಇವರನ್ನು ಹಿಂಬಾಲಿಸುತ್ತಾರೆ. 2008ರ ವರ್ಷದಲ್ಲಿ ವಿಶ್ವದಲ್ಲೇ ಅತ್ಯಂತ ಶ್ರೀಮಂತರೆನಿಸಿದ್ದ ಇವರು ತಮ್ಮ ಬಹುಪಾಲು ಸಂಪತ್ತನ್ನು ಸಮಾಜ ಸೇವೆಗೆ ಕೊಟ್ಟಿದ್ದರು.

ಅಮೆನಿಕೊ ಒರ್ಟೆಗಾ

ಸಂಸ್ಥೆ: ಪ್ಯಾಷನ್ ಹೌಸ್ ಇಂಡಿಟೆಕ್ಸ್ 
ಒಟ್ಟು ಆಸ್ತಿ ಮೌಲ್ಯ: USD 78 ಬಿಲಿಯನ್ 
ಅಮೆನಿಕೊ ಒರ್ಟೆಗಾ ಯೂರೋಪಿನ ಅತಿ ಶ್ರೀಮಂತ ವ್ಯಕ್ತಿ. ಝರಾ ಜವಳಿ ಉತ್ಪನ್ನ ಸರಣಿಯ ಸಂಸ್ಥಾಪಕರಾದ ಇವರು 1975ರಲ್ಲಿ ಝರಾ ಪ್ಯಾಷನ್ ಅಂಗಡಿಯನ್ನು ತೆರೆದರು. ಇದೀಗ ಒರ್ಟೆಗಾಸ್ ಇಂಡಿಟೆಕ್ಸ್ ಗ್ರೂಪ್ ಜಾಗತಿಕವಾಗಿ 7000 ಅಂಗಡಿಗಳನ್ನು ಹೊಂದಿದೆ.

ಮಾರ್ಕ್ ಜುಗರ್ ಬರ್ಗ್

ಸಂಸ್ಥೆ: ಪೇಸ್ಬುಕ್ 
ಒಟ್ಟು ಆಸ್ತಿ ಮೌಲ್ಯ: USD 73 ಬಿಲಿಯನ್ 
ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣ ಪೇಸ್ಬುಕ್ ಎಲ್ಲರಿಗೂ ಪ್ರಿಯ! ಅಮೆರಿಕಾ ಮೂಲದ ಮಾರ್ಕ್ ಜುಗರ್ ಬರ್ಗ್ ಪ್ರಸಿದ್ದ ಅಂತರ್ಜಾಲ ಉದ್ಯಮಿ ಹಾಗೂ ಪ್ರೋಗ್ರಾಮರ್ ಆಗಿದ್ದಾರೆ. ಇವರು ಪೇಸ್ಬುಕ್ ಸಂಸ್ಥೆಯ ಅಧ್ಯಕ್ಷ, ಸಿಇಒ ಮತ್ತು ಸಹಸಂಸ್ಥಾಪಕರಾಗಿದ್ದಾರೆ.

ಕಾರ್ಲೋಸ್ ಸ್ಲಿಮ್

ಸಂಸ್ಥೆ: ಅಮೆರಿಕನ್ ಮೊವಿಲ್(ದೂರಸಂಪರ್ಕ) 
ಒಟ್ಟು ಆಸ್ತಿ ಮೌಲ್ಯ: USD 68 ಬಿಲಿಯನ್ 
ಕಾರ್ಲೋಸ್ ಸ್ಲಿಮ್ ಇವರು ಮೆಕ್ಸಿಕನ್ ಪ್ರಸಿದ್ದ ಉದ್ಯಮಿ. ಬಹುರಾಷ್ಟ್ರೀಯ ದೂರಸಂಪರ್ಕ ಕಂಪನಿ ಅಮೆರಿಕನ್ ಮೊವಿಲ್ ನಲ್ಲಿ 42 ಶತಕೋಟಿ ಒಡೆತನ ಹೊಂದಿದ್ದಾರೆ.

ಲ್ಯಾರಿ ಎಲಿಸನ್

ಸಂಸ್ಥೆ: ಓರಾಕಲ್ 
ಒಟ್ಟು ಆಸ್ತಿ ಮೌಲ್ಯ: USD 60 ಬಿಲಿಯನ್
ಲ್ಯಾರಿ ಎಲಿಸನ್ ಅಮೆರಿಕಾದ ಉದ್ಯಮಿ ಹಾಗೂ ಓರಾಕಲ್ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಇಒ. ಓರಾಕಲ್ ಕಂಪನಿ ಅಮೆರಿಕಾದ ಬಹುರಾಷ್ಟ್ರೀಯ ಕಂಪ್ಯೂಟರ್ ಟೆಕ್ನಾಲಜಿ ಕಾರ್ಪೋರೇಷನ್ ಆಗಿದೆ. ಲ್ಯಾರಿ ಎಲಿಸನ್ ಕ್ಲೌಡ್ ಕಂಪ್ಯೂಟಿಂಗ್ ಮೇಲೆ ಹೆಚ್ಚು ಗಮನ ಕೇಂದ್ರಕರಿಸಿದ್ದು, ಇದರಲ್ಲಿ ದತ್ತಾಂಶವನ್ನು ಸಂಗ್ರಹಿಸಿ ನಿರ್ವಹಣೆ ಮಾಡಲಾಗುತ್ತದೆ.

ಮೈಕೆಲ್ ಬ್ಲೂಮ್ಬರ್ಗ್

ಒಟ್ಟು ಸಂಪತ್ತು: USD 52 ಬಿಲಿಯನ್
ನ್ಯೂಯಾರ್ಕ್ ನ ಮಾಜಿ ಮೇಯರ್ ಆಗಿರುವ ಮೈಕೆಲ್ ಬ್ಲೂಮ್ಬರ್ಗ್ ಅಮೆರಿಕಾದ ಬಿಸಿನೆಸ್ಮೆನ್, ಲೇಖಕ ಮತ್ತು ದಾನಿ. ಹಣಕಾಸು ಸೇವಾ ಸಂಸ್ಥೆಗಳಿಗೆ ಡೇಟಾ ಟರ್ಮಿನಲ್ ಮಾರಾಟ ಮಾಡುವ ವ್ಯವಹಾರ ಮಾಡುತ್ತಾರೆ.

ಲ್ಯಾರಿ ಪೇಜ್

ಸಂಸ್ಥೆ: ಗೂಗಲ್ ಇಂಕ್ 
ಒಟ್ಟು ಆಸ್ತಿ ಮೌಲ್ಯ: USD 51 ಬಿಲಿಯನ್ 
ಲ್ಯಾರಿ ಪೇಜ್ ಅಮೆರಿಕಾದ ಕಂಪ್ಯೂಟರ್ ವಿಜ್ಞಾನಿ ಮತ್ತು ಅಂತರ್ಜಾಲ ಉದ್ಯಮಿ. ಗೂಗಲ್ ಪೇರೆಂಟ್ ಮತ್ತು ಅಲ್ಫಾಬೆಟ್ ಇಂಕ್. ಕಂಪನಿಯ ಸಿಇಒ.

ಫ್ರೆಶ್ ನ್ಯೂಸ್

Latest Posts

Featured Videos