ಗುಡ್ಡದ ಮೇಲಿಂದ ಜಿಗಿದ ಜಿಂಕೆ

ಗುಡ್ಡದ ಮೇಲಿಂದ ಜಿಗಿದ ಜಿಂಕೆ

ಚಿಕ್ಕಮಗಳೂರು, ಸೆ. 8 : ನಾಯಿಗಳಿಂದ ಪಾರಾಗಲು ಜಿಂಕೆಯೊಂದು ಗುಡ್ಡದ ಮೇಲಿಂದ ಮನೆ ಮಾಡಿನ ಮೇಲೆ ಜಿಗಿದ ಪರಿಣಾಮ ಮನೆಯ ಹೆಂಚು ಒಡೆದು, ತಂದೆ -ಮಗಳಿಗೆ ಗಾಯವಾದ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ.
ನಾಯಿಗಳು ಅಟ್ಟಾಡಿಸಿಕೊಂಡು ಬಂದ ಪರಿಣಾಮ ಭಯಭೀತವಾಗಿದ್ದ ಜಿಂಕೆ ಗುಡ್ಡದಿಂದ ಮನೆಯ ಮೇಲೆ ಜಿಗಿದಿತ್ತು . ಈ ವೇಳೆ ರೂಪಿಂಗ್ ಮುರಿದು ಬಿದ್ದು ಅಡುಗೆ ಕೋಣೆಯಲ್ಲಿದ್ದ ತಂದೆ – ಮಗಳಿಗೆ ಗಾಯವಾಗಿದೆ.
ಗಾಯಾಳುಗಳಿಗೆ ಮೂಡಿಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮೂಡಿಗೆರೆ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos