ಪರಿಸರಕ್ಕೆ ಅನುಗುಣವಾಗಿ ಗಿಡಮರಗಳನ್ನು ಬೆಳೆಸಿ

ಪರಿಸರಕ್ಕೆ ಅನುಗುಣವಾಗಿ ಗಿಡಮರಗಳನ್ನು ಬೆಳೆಸಿ

ಕೆ.ಆರ್.ಪುರ, ಮಾ. 14: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಿಡಿತ ಫೌಂಡೇಶನ್ ಸಹಯೋಗದಲ್ಲಿ ಡಾ.ಪರಿಸರ ಮಂಜು ರವರ ನಾ ಕಂಡ ಪರಿಸರ ಅಳಿವು ಉಳಿವಿನಂಚಿನಲ್ಲಿ ಕವನ ಸಂಕಲನದ ಶೀರ್ಷಿಕೆ ಹಾಗೂ ಮುಖಪುಟ ಬಿಡುಗಡೆ ಕಾರ್ಯಕ್ರಮವನ್ನು ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ತಾಲ್ಲೂಕು ವೈದ್ಯ ಅಧಿಕಾರಿ ಡಾ.ಚಂದ್ರಶೇಖರ್, ಕವನ ಸಂಕಲನದ ಶೀರ್ಷಿಕೆ ಹಾಗೂ ಮುಖಪುಟ ಬಿಡುಗಡೆ ಮಾಡಿ ಮಾತನಾಡಿ, ನಗರದಲ್ಲಿ ತಾಪಮಾನ ಹೆಚ್ಚಾಗಿದ್ದು, ಪರಿಸರಕ್ಕೆ ಅನುಗುಣವಾಗಿ ಗಿಡಮರಗಳನ್ನು ಬೆಳೆಸುವ ಪರಿಪಾಠ ಪ್ರತಿಯೊಬ್ಬರು ಇಟ್ಟುಕೊಳ್ಳಬೇಕು. ನಗರದ ವೈಟ್ ಫೀಲ್ಡ್ ನ ಅಪಾರ್ಟ್ ಮೆಂಟ್ ಒಂದರಲ್ಲಿ ಮೂರು ಜನರಲ್ಲಿ ಕರೋನ ಇರುವುದನ್ನು ಪತ್ತೆ ಮಾಡಲಾಗಿದೆ. ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುವ 830 ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಅಪಾರ್ಟ್ ಮೆಂಟ್ ನ ಜನರನ್ನು ಹೋರ ಬರದಂತೆ ನಿಗಾ ಇಡಲಾಗಿದೆ. ಸಾರ್ವಜನಿಕರು ಕರೋನ ಜಾಗೃತಿ ವಹಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು. ಕನ್ನಡ ಪ್ರಾಧ್ಯಾಪಕ ಹಾಗೂ ಕವಿ ಟಿ.ಯಲ್ಲಪ್ಪ ಮಾತನಾಡಿ, ಸಾರ್ವಜನಿಕರು ಗಿಡಮೂಲಿಕೆಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ಕವನ ಸಂಕಲನ ಶೀರ್ಷಿಕೆ ಬಿಡುಗಡೆ ಸಂಧರ್ಭದಲ್ಲಿ 101 ವಿವಿಧ ತಳಿಗಳ ಗಿಡಮೂಲಿಕೆ ಇರುವ ಸಸಿಗಳನ್ನು ವಿತರಿಸಿರುವುದು ಶ್ಲಾಘನೀಯ. ಈ ಕಾರ್ಯದಿಂದ ಸಾರ್ವಜನಿಕರಿಗೆ ಅರಿವು ಮೂಡಿಸಿದಂತಾಗುತ್ತದೆ. ಈ ಪರಿಪಾಠ ಯುವಕರಿಗೆ ಮಾದರಿಯಾಗಲಿ. ಬಹಳ ಹಿಂದಿನಿಂದಲೂ ಬೆಳೆದು ಬಂದಿರುವ ಅರ್ಯ ವೈದ್ಯ ಪದ್ದತಿ ಬೆಳೆಸಬೇಕಿದೆ ಎಂದರು.

ಕಾರ್ಯಕ್ರಮ ಅಂಗವಾಗಿ 101 ತಳಿಯ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಪೂರ್ವ ತಾಲ್ಲೂಕು ತಹಶಿಲ್ದಾರ್ ಎನ್. ತೇಜಸ್ ಕುಮಾರ್, ಡಾ‌.ಅಜಿತ್ ಕುಮಾರ್, ಕೆ.ಪಿ.ಕೃಷ್ಣ, ಕನ್ನಡ ವೆಂಕಟೇಶ್ ಇದ್ದರು.

 

 

 

ಫ್ರೆಶ್ ನ್ಯೂಸ್

Latest Posts

Featured Videos