ಗೂಳಿ ಕಾಳಗ

ಗೂಳಿ ಕಾಳಗ

ಚಿಕ್ಕಮಗಳೂರು, ಡಿ. 25: ಇಂದು ಮುಂಜಾನೆ 7 ಗಂಟೆಗೆ ವೇಳೆ ನಗರದಲ್ಲಿ ನಡೆದ ಗೂಳಿ ಕಾಳಗ ಜನರನ್ನು ಆತಂಕಗೊಳಿಸುವ ಜೊತೆಗೆ ಮನರಂಜನೆಯನ್ನು ಸಹ ನೀಡಿದೆ.

ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಸರ್ಕಾರಿ ಶಾಲೆಯ ಎದುರು ಸತತ 1 ಗಂಟೆಗಳ ಕಾಲ 2 ಗೂಳಿಗಳು ತಾ ಮೇಲು ನಾ ಮೇಲು ಎಂದು ಕುಸ್ತಿಗೆ ಬಿದ್ದು ಕಾಳಗ ನಡೆಸಿವೆ. ಇದರಿಂದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಜನರಿಗೆ 1 ಗಂಟೆಗಳ ಕಾಲ ಪುಕ್ಕಟ್ಟೆ ಮನರಂಜನೆಯ ಜೊತೆಗೆ ಗಾಬರಿ ಸಹ ಉಂಟಾಗಿತ್ತು.

ನಡುರಸ್ತೆಯಲ್ಲಿ ಪ್ರಾರಂಭವಾದ ಗೂಳಿಗಳ ಕಾಳಗ ಎಂಟು ಗಂಟೆಯಾದ್ರು ಮುಗಿದಿರಲಿಲ್ಲ. ಕೊನೆಗೆ ಸ್ಥಳೀಯರು ಎಷ್ಟು ಅವುಗಳನ್ನು ಬೆದರಿಸಲು ಪ್ರಯತ್ನಿಸಿದ್ರು ಬಿಟ್ಟು ಬಿಟ್ಟು ಜಗಳಕ್ಕೆ ಬಿದ್ದ ಗೂಳಿಗಳು ಪೈಟ್ ಮಾಡಿದ್ದು ಸ್ಥಳೀಯರಲ್ಲಿ ಒಂದು ಗಂಟೆಗಳ ಕಾಲ ಮನರಂಜನೆಗೆ ಕಾರಣವಾಯ್ತು. ಇನ್ನು ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಗೂಳಿಕಾಳಗದಿಂದ ಪರಿತಪಿಸುವಂತಾಯಿತು.

 

ಫ್ರೆಶ್ ನ್ಯೂಸ್

Latest Posts

Featured Videos